ಶನಿವಾರ, 16–11–1968

7

ಶನಿವಾರ, 16–11–1968

Published:
Updated:

ಕೇಂದ್ರ ತೆರಿಗೆ ಆದಾಯದಿಂದ ರಾಜ್ಯಗಳಿಗೆ 91 ಕೋಟಿ ರೂ. ಹೆಚ್ಚು ಹಣ: ಮೈಸೂರಿಗೆ 3 ಕೋಟಿ

ನವದೆಹಲಿ, ನ. 15– ರಾಜ್ಯಗಳಿಗೆ 1969–70ನೇ ಸಾಲಿನಲ್ಲಿ 91 ಕೋಟಿ ರೂಪಾಯಿಗಳಷ್ಟು ಹೆಚ್ಚಿನ ಹಣ ಲಭಿಸುವುದು. ತೆರಿಗೆ ಮತ್ತು ಸುಂಕದಲ್ಲಿ ರಾಜ್ಯಗಳ ಪಾಲು ಮತ್ತು ಕೇಂದ್ರದಿಂದ ರಾಜ್ಯಗಳಿಗೆ ದೊರಕುವ ದ್ರವ್ಯಸಹಾಯ ಹೆಚ್ಚುವುದರಿಂದ ಈ ಹೆಚ್ಚುವರಿ ಹಣ ದೊರೆಯಲಿದೆ.

ಮಹಾವೀರ ತ್ಯಾಗಿಯವರ ನೇತೃತ್ವದಲ್ಲಿ ಐದನೆ ಹಣಕಾಸು ಆಯೋಗ ಈ ತಾತ್ಕಾಲಿಕ ಶಿಫಾರಸುಗಳನ್ನು ಮಾಡಿದೆ.

ಆರ್ಥಿಕ ಪ್ರಗತಿಗೆ ಸುಭದ್ರ ಸರ್ಕಾರ ಅಗತ್ಯ: ರಾಷ್ಟ್ರಪತಿ

ನವದೆಹಲಿ, ನ. 1– ಮುಂದಿನ ಫೆಬ್ರವರಿಯಲ್ಲಿ ಮಧ್ಯಕಾಲೀನ ಚುನಾವಣೆಗಳು ನಡೆದ ನಂತರ ಪಶ್ಚಿಮ ಬಂಗಾಳ, ಬಿಹಾರ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ‘ಸುಭದ್ರ ಸರ್ಕಾರ’ಗಳು ರಚನೆಯಾಗುವುವು ಎಂಬುದು ಕೇಂದ್ರ ಸರ್ಕಾರದ ಆಶಯ ಎಂದು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಇಂದು ತಿಳಿಸಿದರು.

ಕೇಂದ್ರ ನೌಕರರ ಮುಷ್ಕರ: ಪೊಲೀಸ್ ಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಕಾರ

ನವದೆಹಲಿ, ನ. 15– ಕೇಂದ್ರ ಸರ್ಕಾರಿ ನೌಕರರು ಸೆಪ್ಟೆಂಬರ್ 19ರಂದು ನಡೆಸಿದ ಸಾಂಕೇತಿಕ ಮುಷ್ಕರದ ಸಂದರ್ಭದಲ್ಲಿ ಪಠಾನ್‌ಕೋಟ್ ಮತ್ತು ಬಿಕಾನೀರ್‌ಗಳಲ್ಲಿ ನಡೆದ ಪೊಲೀಸ್ ಗೋಳಿಬಾರ್ ಮತ್ತು ದೆಹಲಿಯ ಇಂದ್ರಪ್ರಸ್ಥ ಎಸ್ಟೇಟಿನಲ್ಲಿ ನಡೆದ ಪೊಲೀಸ್ ಲಾಠಿಪ್ರಹಾರಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಲೋಕಸಭೆಯಲ್ಲಿ ವಿರೋಧ ಪಕ್ಷದವರು ಇಂದು ಒತ್ತಾಯ ಮಾಡಿದರು.

ನಿಷ್ಠಾವಂತ, ಪ್ರಬಲ ವಿರೋಧಪಕ್ಷ ಬಹು ಅಗತ್ಯ: ಎಸ್ಸೆನ್

ಬೆಂಗಳೂರು, ನ. 15– ಜಾತ್ಯತೀತ ಭಾವನೆ ಮತ್ತು ರಾಷ್ಟ್ರ ಹಾಗೂ ಪ್ರಜಾಸತ್ತೆಯಲ್ಲಿ ನಿಷ್ಠೆ ಹೊಂದಿದ ಪ್ರಬಲ ವಿರೋಧ ಪಕ್ಷವೊಂದು ರೂಪುಗೊಳ್ಳುವುದು ಭಾರತಕ್ಕೆ ಅತಿ ಅಗತ್ಯವಾಗಿದೆಯೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪನವರು ಇಂದು ಇಲ್ಲಿ ನುಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !