ಕೈಗಾರಿಕಾ ಭದ್ರತಾ ಪಡೆ ಮಸೂದೆಗೆ ಲೋಕಸಭೆ ಅಸ್ತು

7

ಕೈಗಾರಿಕಾ ಭದ್ರತಾ ಪಡೆ ಮಸೂದೆಗೆ ಲೋಕಸಭೆ ಅಸ್ತು

Published:
Updated:

ಕೈಗಾರಿಕಾ ಭದ್ರತಾ ಪಡೆ ಮಸೂದೆಗೆ ಲೋಕಸಭೆ ಅಸ್ತು: ವಿರೋಧ ಪಕ್ಷಗಳ ಪಾಲಿಗೆ ‘ಕರಾಳ ದಿನ’, ಸಭಾತ್ಯಾಗ

ನವದೆಹಲಿ, ನ. 19– ಲೋಕಸಭೆಯಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ ಕೈಗಾರಿಕಾ ಭದ್ರತಾ ಪಡೆ ಮಸೂದೆ ಇಂದು 81–
22 ಮತಗಳಿಂದ ಅಂಗೀಕೃತವಾದ ನಂತರ ಇಡೀ ವಿರೋಧ ಪಕ್ಷ ಸಭಾತ್ಯಾಗ ಮಾಡಿತು.

‘ಕರಾಳ ಶಾಸನವನ್ನು ಹಿಂದಕ್ಕೆ ತೆಗೆದುಕೊಳ್ಳಿ’, ‘ನಾಚಿಕೆಗೇಡು’ ಎಂದು ಕೂಗುತ್ತಾ ವಿರೋಧ ಪಕ್ಷ ಸದಸ್ಯರು ಸದನದಿಂದ ಹೊರಬಂದರು.

‘ದಬ್ಬಾಳಿಕೆಯ ಮತ್ತೊಂದು ಸಾಧನ’ವೆಂದು ಬಣ್ಣಿಸಲಾದ ಈ ಮಸೂದೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ವಿರೋಧ ಪಕ್ಷ ಒತ್ತಾಯ ಮಾಡಿತು.

ಕೇಂದ್ರ ಕೈಗಾರಿಕೆಗಳ ಭದ್ರತೆ ಮತ್ತು ಉತ್ತಮ ರಕ್ಷಣೆಗಳಿಗಾಗಿ ಪಡೆಯೊಂದರ ರಚನೆಗೆ ಈ ಮಸೂದೆ ಅವಕಾಶ ಕಲ್ಪಿಸುತ್ತದೆ.

ಈ ಮಸೂದೆಯನ್ನು ಮಂಡಿಸಿದ ಸಚಿವ ಶುಕ್ಲಾ ಅವರು ಕೈಗಾರಿಕಾ ಭದ್ರತಾ ಪಡೆಯ ಅವಶ್ಯಕತೆಯನ್ನು ರಾಂಚಿ ಮತ್ತು ದುರ್ಗಾಪುರ ಕಾರ್ಖಾನೆಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ವಿವರಿಸಿದರು.

ಕೇಂದ್ರ ನೌಕರರ ಬಗ್ಗೆ ಕ್ಷಮಾದಾನಕ್ಕೆ ಪ್ರಧಾನಿ ನಿರಾಕರಣೆ

ನವದೆಹಲಿ, ನ. 19– ಸೆಪ್ಟೆಂಬರ್ 19 ರಂದು ಮುಷ್ಕರದಲ್ಲಿ ಭಾಗವಹಿಸಿದ ಎಲ್ಲ ಕೇಂದ್ರ ನೌಕರರಿಗೂ ಕ್ಷಮಾದಾನ ನೀಡಬೇಕೆಂಬ ವಿರೋಧ ಪಕ್ಷಗಳ ಮನವಿಯನ್ನು ಪ್ರಧಾನಿ ಇಂದಿರಾ ಇಂದು ತಿರಸ್ಕರಿಸಿದರು.

ನಿರಪರಾಧಿ ನೌಕರರು ಯಾರಾದರೂ ಶಿಕ್ಷೆಗೊಳಗಾಗಿದ್ದರೆ ಅಂಥವರಿಗೆ ತಕ್ಕ ಪರಿಹಾರ ನೀಡಲಾಗುವುದೆಂದು ಪ್ರಧಾನಿ ಭರವಸೆ ಇತ್ತರು.

ಅನುಭವವೇ ಸಾಹಿತ್ಯ: ಡಾ. ಕಾರಂತ್

ಮಂಗಳೂರು, ನ. 19– ಅನುಭವಿಸಿದ ವಿಚಾರಗಳನ್ನು ಇನ್ನಾವುದೇ ಕಾಲದಲ್ಲಿ ಹೊರಗೆಡಹಿದರೆ ಅದು ಸಾಹಿತ್ಯವಾಗುತ್ತದೆ ಎಂದು ಇಂದು ಸಂಜೆ ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಡಾ. ಶಿವರಾಮ ಕಾರಂತರು ನುಡಿದರು.

ಸಾಹಿತ್ಯಕ್ಕೆ ತಾಳಿಕೆಯ ಗುಣ ಬರಬೇಕಾದರೆ ಜನತೆ ಪ್ರಜ್ಞಾಶೀಲರಾಗಬೇಕೆಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !