ಬುಧವಾರ, 8–1–1969

7

ಬುಧವಾರ, 8–1–1969

Published:
Updated:

ಕೇಂದ್ರ ನೌಕರರು ಕೆಲಸಕ್ಕೆ ವಾಪಸಾಗಲು ವಿಶೇಷ ರಿಯಾಯಿತಿ
ನವದೆಹಲಿ, ಜ. 7–
ಸೆಪ್ಟೆಂಬರ್ 19 ರಂದು ಕೇಂದ್ರ ಸರ್ಕಾರಿ ನೌಕರರ ಮುಷ್ಕರದ ಪರಿಣಾಮ ಗೈರು ಹಾಜರಾಗಿ ದಸ್ತಗಿರಿಯಾದ ಅಥವಾ ಮೊಕದ್ದಮೆಗಳಿಗೀಡಾಗಿದ್ದ ಎಲ್ಲಾ ನೌಕರರು ಮತ್ತೆ ಕೆಲಸಗಳಿಗೆ ವಾಪಸಾಗಬಹುದೆಂದು ಕೇಂದ್ರ ಸರ್ಕಾರ ಪ್ರಕಟಿಸಿತು.

ಮುಷ್ಕರ ಕಾಲದಲ್ಲಿ ಶಿಕ್ಷೆಗೊಳಗಾದವರ ವಿರುದ್ಧವೂ ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಮಾಯಣ ದರ್ಶನ ಜಂಬೂ ಸವಾರಿ
ಬೆಂಗಳೂರು, ಜ. 7–
ಕನ್ನಡ ಚಳಿವಳಿಗಾರರ ಆಶ್ರಯದಲ್ಲಿ ಮಂಗಳವಾರ ಸಂಜೆ ಆನೆ ಮೇಲೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮೆರವಣಿಗೆ ನಡೆಯಿತು. ಮೈಸೂರು ಬ್ಯಾಂಕ್ ಚೌಕದಿಂದ ಹೊರಟ ಮೆರವಣಿಗೆಯು ಚಿಕ್ಕಲಾಲ್‌ಬಾಗಿನಲ್ಲಿ ಮುಕ್ತಾಯಗೊಂಡಿತು.

ತೆರಿಗೆ ವಸೂಲಿಗೆ ಸರಳ ಕ್ರಮ
ಬೆಂಗಳೂರು, ಜ. 7–
ತೆರಿಗೆದಾರರಿಗೆ ಸಹಕಾರಿಯಾಗಿರಬೇಕೇ ವಿನಾ ಕಿರುಕುಳವಾಗಿರತಕ್ಕದ್ದಲ್ಲ. ವರಮಾನ ತೆರಿಗೆ ಆಡಳಿತಕ್ಕೆ ಸಂಬಂಧಿಸಿದ ವರದಿಯಲ್ಲಿ ಆಡಳಿತ ಸುಧಾರಣಾ ಆಯೋಗವು ಈ ಅಂಶವನ್ನು ಸ್ಪಷ್ಟಪಡಿಸಿದೆ.

ತೆರಿಗೆಗೆ ಸಂಬಂಧಿಸಿದ ಸಾಹಿತ್ಯವನ್ನು ಅತ್ಯಂತ ಸರಳ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಒದಗಿಸಬೇಕು. ವರಮಾನ ತೆರಿಗೆ ಕಚೇರಿಗಳಲ್ಲಿ ತೆರಿಗೆ ಸ್ವೀಕರಿಸುವ ಕೌಂಟರುಗಳನ್ನು ಹೊಂದಿದ್ದು ಭಾರಿ ಪ್ರಮಾಣದ ತೆರಿಗೆ ಸಲ್ಲಿಸುವವರಿಗಾಗಿ ವೈಯಕ್ತಿಕ ಲೆಡ್ಜರ್ ಇಡತಕ್ಕದ್ದು. ತೆರಿಗೆ ಸಂಗ್ರಹದಲ್ಲಿ ಈಗಿರುವ ಕ್ಲಿಷ್ಟ ಸಂಪ್ರದಾಯ, ಸಂಸ್ಥೆಗಳ ರಿಜಿಸ್ಟ್ರೇಷನ್‌ಗೆ ಇರುವ ವಿವರವಾದ ಕ್ರಮಗಳನ್ನು ರದ್ದು ಮಾಡಿ ಕಂಪೆನಿಗಳ ವಿಚಾರದಲ್ಲಿ ಹಿಂದಿನ ವರ್ಷ ವಿಧಿಸಲಾದ ತೆರಿಗೆ ಮೊತ್ತವನ್ನು ಪರಿಗಣಿಸತಕ್ಕದ್ದೆಂದು ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !