ಶನಿವಾರ, 11–1–1969

7
ವಾರ

ಶನಿವಾರ, 11–1–1969

Published:
Updated:

ಸಿಂಗರಿಸಿದ ಹೊಸ ರೈಲ್ವೆ ನಿಲ್ದಾಣ: ಬೆಂಗಳೂರಿಗೆ ಪೊಂಗಲ್ ಕೊಡುಗೆ

ಬೆಂಗಳೂರು, ಜ. 10– ಫ್ರಾನ್ಸಿನ ಪ್ಯಾರಿಸ್‌ನಲ್ಲಿ ಒಂದಿದೆ. ಅದರ ಹೆಸರು ಸೈಂಟ್‌ಲಾಜರ್ ರೈಲ್ವೇ ಸ್ಟೇಷನ್, ಭಾರತದಲ್ಲಿ ಎರಡನೆಯದೊಂದು ಎದ್ದಿದೆ. ಅದರ ಹೆಸರು ಬೆಂಗಳೂರು ರೈಲ್ವೇ ಸ್ಟೇಷನ್.

ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರ್ತಿಯಾಗಿ, ಜನವರಿ 14ರ ಪೊಂಗಲ್ ದಿನದಂದು ಉಪಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ ಅವರಿಂದ ಉದ್ಘಾಟಿಸಲ್ಪಡುವ, ಸುಂದರ ಆಧುನಿಕ ವಾಸ್ತುಶಿಲ್ಪಿ ಮೈವೆತ್ತು ಪರಿಪೂರ್ಣಗೊಂಡಂತಿರುವ ಈ ಬೃಹತ್ ನಿರ್ಮಾಣ, ಬೆಂಗಳೂರಿಗರಿಗೆ ಮಾತ್ರವಲ್ಲ ರಾಜ್ಯಕ್ಕೇ ಒಂದು ಸಂಕ್ರಾಂತಿ ಕೊಡುಗೆ. ಬೆಂಗಳೂರಿಗೆ ಬರುವವರೆಲ್ಲ ಕತ್ತೆತ್ತಿ ನೋಡಿ ಹೆಮ್ಮೆಪಟ್ಟುಕೊಳ್ಳುವಂಥ ಕೊಡುಗೆ.

ಕಳೆದ ಏಳು ದಶಕಗಳಿಂದ, ಪ್ರಯಾಣಿಕರಿಗೆ ಕಣ್ಣು ನೋವೆನಿಸಿದ್ದ ಹಳೆಯ ರೈಲ್ವೆ ಸ್ಟೇಷನ್ ನೋಡಿ, ಹೊಸ ಅಂಗಣಕ್ಕೆ ಕಾಲಿಡುವವರಿಗೆ, ಅದೊಂದು ಸೊಗಸು, ಶುಚಿತ್ವ ಮತ್ತು ಸೌಕರ್ಯಗಳ ಪರಮಾವಧಿಯ ಅನುಭವ.

ಕೆಲವು ವರ್ಷಗಳ ಹಿಂದೆ, ಪ್ರಧಾನಿ ನೆಹರೂ ಅವರು ಬೆಂಗಳೂರಿಗೆ ಹೊಸ ರೈಲ್ವೇ ನಿಲ್ದಾಣ ಬೇಕೆಂದು ಹೇಳಿದಾಗ ಪ್ರಾಯಶಃ ಇದೇ ಅವರ ದೃಷ್ಟಿಯಲ್ಲಿದ್ದದ್ದಿರಬೇಕು.

ಹೃದಯಾಘಾತದಿಂದ ರಾಜ್ಯದ ಮಾಜಿ ಸಚಿವ ಕೆ.ಕೆ. ಹೆಗ್ಡೆ ನಿಧನ

ಬೆಂಗಳೂರು, ಜ. 10– ರಾಜ್ಯದ ಮಾಜಿ ಆರೋಗ್ಯ ಸಚಿವ ಶ್ರೀ ಕೆ.ಕೆ. ಹೆಗ್ಡೆ ಅವರು ಇಂದು ಸಂಜೆ ಪ್ಯಾಲೇಸ್ ಆರ್ಚರ್ಡ್‌ನಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅವರಿಗೆ 62 ವರ್ಷ ವಯಸ್ಸಾಗಿತ್ತು. ದಿವಂಗತ ಹೆಗ್ಗಡೆ ಅವರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರೂ ಇದ್ದಾರೆ.

ಶುಕ್ರನತ್ತ ರಷ್ಯದ ಮತ್ತೊಂದು ಬಾಹ್ಯಾಕಾಶ ನೌಕೆ

ಮಾಸ್ಕೊ, ಜ. 10– ವಿಸ್ಮಯಕಾರಿ ಗ್ರಹ ಶುಕ್ರನತ್ತ ಹೊಸದೊಂದು ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ರಷ್ಯವು ಇಂದು ಹಾರಿಸಿತು.

ಐದು ದಿನಗಳ ಹಿಂದೆ ಶುಕ್ರನತ್ತ ಯಾನ ಮಾಡಿರುವ ವೀನಸ್–5 ರೊಂದಿಗೆ ಸಂಯುಕ್ತವಾಗಿ ಪ್ರಯೋಗಗಳನ್ನು ನಡೆಸಲು ಈ ಬಾಹ್ಯಾಕಾಶ ನೌಕೆಯನ್ನು ಹಾರಿಸಲಾಗಿದೆ ಎಂದು ತಾಸ್ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !