ಭಾನುವಾರ, 12–1–1969

7

ಭಾನುವಾರ, 12–1–1969

Published:
Updated:

ಪಟ್ಣ ಬಳಿ ಉದ್ರಿಕ್ತ ಜನರ ಮೇಲೆ ಗೋಲೀಬಾರು: ಇಬ್ಬರ ಮರಣ
ಪಟ್ಣ, ಜ. 11–
ಪೂರ್ವ ರೈಲ್ವೆಯ ಕಾರಿಸಾತ್ ಮತ್ತು ಆರಾ ರೈಲ್ವೆ ನಿಲ್ದಾಣಗಳಲ್ಲಿ ಗಲಭೆ ಮತ್ತು ಗೊಂದಲದಲ್ಲಿ ತೊಡಗಿದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಎರಡು ಕಡೆಯಲ್ಲೂ ಇಂದು ಗುಂಡು ಹಾರಿಸಿದಾಗ ಇಬ್ಬರು ಸತ್ತು ಏಳು ಮಂದಿಗೆ ಗಾಯವಾಯಿತು.

ಗೋಲೀಬಾರ್ ನಡೆದ ಕಾರಿಸಾತ್‌ನ ಸ್ಥಳದಲ್ಲೇ ಒಬ್ಬ ಸತ್ತ, ಗಾಯಗೊಂಡ ಮತ್ತೊಬ್ಬ ಆರಾ ಆಸ್ಪತ್ರೆಯಲ್ಲಿ ಮರಣ ಹೊಂದಿದ. ಆರಾದಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡುತ್ತಿದ್ದವರ ತನಿಖೆ ಕಾರ್ಯ ನಡೆಯುತ್ತಿದ್ದಾಗ ಉದ್ರಿಕ್ತ ಜನರು ಬೀಸಿದ ಕಲ್ಲು ಹೊಡೆತಕ್ಕೆ ಸಿಕ್ಕಿ ರೈಲ್ವೆ ರಕ್ಷಣಾ ಪಡೆಯ 14 ಮಂದಿ ಮತ್ತು ಐವರು ರಿಸರ್ವ್ ಪೊಲೀಸರು ಗಾಯಗೊಂಡರು.

ಸುತ್ತಿ ಬಳಸಿ ಸಾಗುವ 144 ಮೈಲಿ ಬೆಂಗಳೂರು–ಸೇಲಂ ರೈಲು
ಬೆಂಗಳೂರು, ಜ. 11–
ಸುತ್ತಿ ಬಳಸಿ ಹೋಗುವ 144 ಮೈಲಿ ಉದ್ದದ ರಸ್ತೆ, ಬೆಳೆಯುತ್ತಿರುವ ಕನ್ನಡ ನಾಡಿನ ರಾಜಧಾನಿ ಬೆಂಗಳೂರು– ತಮಿಳುನಾಡಿನ ಪ್ರಮುಖ ಕೈಗಾರಿಕಾ ಕೇಂದ್ರ ಸೇಲಂ ಈ ಎರಡು ನಗರಗಳಿಗೆ ನೇರ ಸಂಪರ್ಕ. ಈ ಹೊಸ ರೈಲು  ಮಾರ್ಗದ ನಿರ್ಮಾಣದ ವೆಚ್ಚ 9.9 ಕೋಟಿ ರೂಪಾಯಿ. ಪ್ರತಿಯೊಂದು ಮೈಲಿ ರಸ್ತೆಗೆ 7 ಲಕ್ಷ ರೂ. ಖರ್ಚು.

ಬೆಳಗಿನ ಭೀತಿ
ಮಡಿಕೇರಿ, ಜ. 11–
ಕೇಂದ್ರ ರೈಲ್ವೆ ಸಚಿವ ಸಿ.ಎಂ. ಪೂಣಚ್ಚರವರಿಗೆ ಬೆಳಗ್ಗೆದ್ದು ದಿನಪತ್ರಿಕೆಗಳೋದುವುದೆಂದರೆ ಮನಸ್ಸಿನಲ್ಲಿ ಒಂದು ಬಗೆಯ ಭೀತಿ, ಅಳುಕು.

ಕಾರಣ: ರಾಷ್ಟ್ರದ ಯಾವುದೇ ಮೂಲೆಯಲ್ಲಿ ರೈಲು ಅಪಘಾತ ನಡೆದ ಸುದ್ದಿ ಇದ್ದೀತೇನೋ ಎಂಬ ಅಂಜಿಕೆ. ಕುಶಾಲ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ರೈಲು ಸಚಿವರು ಮಾತನಾಡುತ್ತಿದ್ದರು. ‘ಆದರೆ ಈಗ ಗ್ರಹಬಲ ತಿಳಿಯಲು ನಾನು ಕೆಲವು ವಾರಪ‍ತ್ರಿಕೆಗಳ ವಾರ ಭವಿಷ್ಯವನ್ನು ಓದಲು ಪ್ರಾರಂಭಿಸಿದ್ದೇನೆ’ ಎಂದ ಪೂಣಚ್ಚರವರು, ‘ರೈಲ್ವೆ ಅಪಘಾತಗಳು ಈಗ ಕಡಿಮೆಯಾಗಿವೆ. ಆದರೆ ಅಪಘಾತಗಳು ಸರಣಿಯಲ್ಲಿ ಸಂಭವಿಸಿ ಬಿಡುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !