ಸೋಮವಾರ, ಮೇ 23, 2022
20 °C

ಶಾಂತಿಗಾಗಿ ಸಮಾಧಾನ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಆಧುನಿಕ ಜೀವನದ ಒತ್ತಡ, ಜಂಜಾಟಗಳಿಂದ ಮನುಷ್ಯನಿಗೆ ನೆಮ್ಮದಿ ಇಲದ್ಲಂತಾಗಿದೆ. ಇದನ್ನು ಮನಗಂಡು ಶಾಂತಿ ಹಾಗೂ ಅತ್ಮ ತೃಪ್ತಿಗಾಗಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಇಚ್ಚೆ ಹಾಗೂ ಆಶೀರ್ವಾದದ ಮೇರೆಗೆ ದಿವ್ಯಶಕ್ತಿಯ ಸಮಾಧಾನ ಸ್ಥಾಪಿಸಲಾಗಿದೆ ಎಂದು ಜಡೆ ಹಿರೇಮಠದ ಅಮರೇಶ್ವರ ದೇಶಿಕರು ಹೇಳಿದರು.ನಗರದ ಹೊರ ವಲಯ ಕೆಸರಟಗಿ ರಸ್ತೆಯ `ಸಮಾಧಾನ~ದಲಿ ್ಲವಿಜಯದಶಮಿ ಹಬ್ಬದಂದು ನಡೆದ ಗುರುಮಾಸಾಚರಣೆ ಸಮಾರೋಪ, ಉಚಿತ ಸಾಮೂಹಿಕ ವಿವಾಹ, ಬನ್ನಿ ಮುಡಿಯುವ ಹಾಗೂ ಧ್ಯಾನ ಮಂದಿರ ನಿರ್ಮಾಣದ ಎರಡನೇ ಹಂತದ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಉದ್ದೆೀಶಿಸಿ ಆಶೀರ್ವಚನ ನೀಡಿದರು.ಗುರು ಮಾಸಾಚರಣೆ ಸಮಾರೋಪ: ಸಮಾಧಾನದಲ್ಲಿ ಬೆಳಿಗ್ಗೆ ಗುರು ಮಾಸಾಚರಣೆ ಸಮಾರೋಪ ನಡೆಯಿತು. ನಿವೃತ್ತ ಉಪನ್ಯಾಸಕಿ ಪ್ರೊ. ನಿಂಗಮ್ಮ ಪತಂಗೆ ಗುರು ಮಾಸಾಚರಣೆ ಮಹತ್ವ ವಿವರಿಸಿದರು.ಶಿಕ್ಷಕ ಶಿವಶಂಕರ ಇಟಗಿ ಹಾಗೂ ಶಿವರಾಜ ಬಿರಾಜದಾರ ಮಾತನಾಡಿ, ಬರುವ ಮಾರ್ಚ್ 23ರಂದು ಜಡೆಯ ಶಾಂತಲಿಂಗೇಶ್ವರ ಸ್ವಾಮಿಗಳ 70ನೇ ಜನ್ಮದಿನವಿದೆ. ಅಂದೇ ಯುಗಾದಿ ಹಬ್ಬವಿರುವುದರಿಂದ ಬಾಗಲಕೋಟೆ ಸಮಾಧಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.  ಭಕ್ತ ಮಂಡಳಿ ಹಾಗೂ ರುದ್ರ ಪಠನ ತಂಡದಿಂದ ಪೂಜ್ಯರ ತುಲಾಭಾರ ಸೇವೆ ನಡೆಯಿತು. ಪೂಜ್ಯರ ಸನ್ನಿಧಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.ಭೂಮಿ ಪೂಜೆ: ಸಮಾಧಾನದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಧ್ಯಾನ ಮಂದಿರ ಎರಡನೇ ಹಂತದ ಕಾಮಗಾರಿಗೆಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿ ಭೂಮಿ ಪೂಜೆ ನೆರವೇರಿಸಿದರು. ಜಡೆ ಹಿರೇಮಠದ ಆಮರೇಶ್ವರ ದೇಶಿಕರು, ಉದ್ಯಮಿ ಬಸವರಾಜ ಭೀಮಳ್ಳಿ, ಎಂಜಿನಿಯರ್ ಬಸವರಾಜ ಗದ್ವಾಲ, ಬಸವರಾಜ ಖಂಡೇರಾವ, ಗಣೇಶ ಮಾಳಗಿ, ಎ.ಬಿ. ಪಾಟೀಲ ಭಮ್ಮನಳ್ಳಿ, ಜಿ.ಎಚ್.ಪಾಟೀಲ,ವೀರಯ್ಯ ಸ್ವಾಮಿ, ಸಿದ್ಧಣ್ಣ ಸರಸಂಬಿ, ಹಣಮಂತರಾವ ಭೈರಾಮಡಗಿ ಮೊದಲಾದವರು ಇದ್ದರು.ಶಿಕ್ಷಕ ಶರಣಬಸಪ್ಪ ಎಂ.ಜೋಗದ ನಿರೂಪಿಸಿದರು. ಶರಣಗೌಡ ಪಾಟೀಲ ಪ್ರಾರ್ಥಿಸಿದರು. ಶೀಲಾ ಡಾ. ಹತ್ತಿ ಸ್ವಾಗತಿಸಿದರು. ದೇವೇಗೌಡ ತೆಲ್ಲೂರ ವಂದಿಸಿದರು. ಪೂಜ್ಯರ ನೇತೃತ್ವದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.