ಸೋಮವಾರ, ಏಪ್ರಿಲ್ 12, 2021
29 °C

ಕೆಂಭಾವಿ: ಮಲ್ಲಯ್ಯನ ಬಂಡಿ ಉತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಐತಿಹಾಸಿಕ ಮಲ್ಲಯ್ಯನ ಬಂಡಿ ಉತ್ಸವವು ಭಕ್ತರ ಹರ್ಘೋದ್ಗಾರ, ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಶುಕ್ರವಾರ ಪಟ್ಟಣದಲ್ಲಿ ಜರುಗಿತು.ವಿಜಯದಶಮಿಯ ಮಾರನೇ ದಿನ ನಡೆಯುವ ಈ ಬಂಡಿ ಉತ್ಸವಕ್ಕೆ ವಿಶೇಷ ಮಹತ್ವವಿದೆ. ಬೆಳಿಗ್ಗೆ 11 ಗಂಟೆಗೆ ಶೃಂಗಾರಗೊಂಡ ಮಲ್ಲಯ್ಯನ ಪ್ರತಿಮೆ ಹೊತ್ತ ಬಂಡಿಗೆ ಮಲ್ಲಯ್ಯನ ದೇವಸ್ಥಾನದಲ್ಲಿ ಪೂಜೆ ಸ್ಲ್ಲಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸತತ 5 ಗಂಟೆ ನಡೆದ ಉತ್ಸವದಲ್ಲಿ ಪಾಲ್ಗೊಂಡಿದ್ದ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಮಲ್ಲಯ್ಯನ ದರ್ಶನ ಪಡೆದರು.ಡೊಳ್ಳು ಕುಣಿತ, ಭಜನೆ ನೋಡುಗರ ಕಣ್ಮನ ತಣಿಸುವಂತಿತ್ತು. ಮುಖ್ಯ ಬಜಾರ್ ರಸ್ತೆಯ ಅಗಸಿಯಲ್ಲಿ ಬಂಡಿಯನ್ನು ಹಿಂದೆ ಮುಂದೆ ಎಳೆಯುವ ಸಂದರ್ಭದಲ್ಲಿ ಯುವಕರು ಉತ್ಸಾಹದಿಂದ `ಏಳ ಕೋಟಿ...ಏಳ ಕೋಟಿಗೋ..~ ಎಂದು ಜಯ ಘೋಷ ಕೂಗಿ ಸಂಭ್ರಮಿಸಿದರು.ನಂತರ ಶಿವಭಾರ ಮಲ್ಲಯ್ಯನಿಗೆ ವಿಶೇಷ ಪೂಜೆ ಸ್ಲ್ಲಲಿಸಿದ ಪೂಜಾರಿಗಳು, ಸಂಪ್ರದಾಯದಂತೆ ಮುಂದೆ ಆಗುವ ಮಳೆ ಹಾಗೂ ಭವಿಷ್ಯದ ಹೇಳಿಕೆ ನುಡಿದರು.ಹಿರಿಯರು ಮಲ್ಲಯ್ಯನ ಬಂಡಿಗೆ ಕಾಯಿ ಒಡೆದು, ಭಂಡಾರ ಎರಚಿ ಹರಕೆ ತೀರಿಸಿದರು, ಮಕ್ಕಳು ಆಟಿಕೆ ಸಾಮಾನುಗಳ ಖರೀದಿಸಿ ಖುಷಿಪಟ್ಟರು.      ಸರಪಳಿ: ಕಂಚಿನ ಮಲ್ಲಯ್ಯನ ಭಕ್ತರು ಶಿವಭಾರ ದೇವಸ್ಥಾನದಲ್ಲಿ (ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ) ಸಂಪ್ರದಾಯದಂತೆ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಿತು. ಮಲ್ಲಣ್ಣ ಪೂಜಾರಿ ಸರಪಳಿ ಹರಿದರು.ಸಿದ್ದನಗೌಡ ಪೊಲೀಸ್‌ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ವಾಮನರಾವ ದೇಶಪಾಡೆ, ಮಲ್ಲನಗೌಡ ಮಾಲಿಪಾಟೀಲ, ಶಿವಲಿಂಗಪ್ಪ ಪೊಲೀಸ್‌ಪಾಟೀಲ, ಅರುಣೋದಯ ಸೊನ್ನದ, ಚನ್ನಯ್ಯ ಚಿಕ್ಕಮಠ, ಶರಣಪ್ಪ ಇಜೇರಿ, ಬಸವರಾಜ ಪೂಜಾರಿ, ಮುದುಕಪ್ಪ ಪೂಜಾರಿ, ಮಹಿಪಾಲರಡ್ಡಿ ಡಿಗ್ಗಾವಿ, ಮುದಕಣ್ಣ ಸಾಹುಕಾರ, ಶ್ರೀಶೈಲ ಆಲ್ದಾಳ, ಶಂಕ್ರಪ್ಪ ಖಾನಾಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.