ಮಂಗಳವಾರ, ಮೇ 24, 2022
26 °C

ಆದಿ ವೀರಶೈವ ಸಮಾಜ 2ಎಗೆ ಸೇರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವೀರಶೈವ ಆದಿ ಬಣಜಿಗ ಸಮಾಜವನ್ನು 2 ಎಗೆ ಸೇರಿಸುವ ಬಗ್ಗೆ ಸರ್ಕಾರ ಈಗಾಗಲೇ ಪ್ರಸ್ತಾವನೆ ಮಾಡಿದೆ. ಆದರೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಆದ್ದರಿಂದ ಸಧ್ಯದಲ್ಲಿಯೇ ನಿಯೋಗ ಮೂಲಕ ಮುಖ್ಯಮಂತ್ರಿ ಸದಾನಂದಗೌಡರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸಮಾಜ ರಾಜ್ಯಾಧ್ಯಕ್ಷ ಆರ್.ಬಿ.ಶಂಕರಗೌಡ ಹೇಳಿದರು.ನಗರದ ಶಿವಶರಣಪ್ಪ ಗದಲೇಗಾಂವ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಜಿಲ್ಲಾ ಆದಿ ವೀರಶೈವ ಸಮಾಜದ ಸಮಾವೇಶ ಉದ್ಘಾಟಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಜಾತಿವಾರು ಜನಗಣತಿಯಲ್ಲಿ  ತಪ್ಪದೇ ಆದಿ ವೀರಶೈವ ಸಮಾಜದವರು ಜಾತಿ ಕಾಲಂನಲ್ಲಿ `ವೀರಶೈವ ಆದಿ ಬಣಜಿಗ~ ಎಂಬುದಾಗಿ ತಪ್ಪದೇ ಬರೆಸಬೇಕೆಂದು ಮನವಿ ಮಾಡಿದರು.ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸದಾಶಿವ ಕಾರಟಗಿ, ಮುಖಂಡರಾದ ವೀರಣ್ಣ ಮಂಗಾಣೆ, ಪ್ರಕಾಶ ಪಾಟೀಲ, ಚನ್ನಪ್ಪ ದಿವಟರ, ಪ್ರಶಾಂತ ಮಾಲಿಪಾಟೀಲ ಮಾಹೂರ ವೇದಿಕೆಯಲ್ಲಿದ್ದರು.ಶ್ರೀಪತಿಗೌಡ ಬಿರಾದಾರ, ಶೇಖಣ್ಣ ಹೈ ಬತ್ತಿ, ಗುರುಸಿದ್ಧಪ್ಪ ಹವಾಲ್ದಾರ, ಆಯ್ಯಪ್ಪ ತುಕ್ಕಾಯಿ, ರವಿ ಕೋಟೆ, ಬಸವಲಿಂಗಪ್ಪ ದಿವಟರ, ಬಸವರಾಜ ಬಿರಾದಾರ, ಸಿದ್ಧಣ್ಣ ಮಾಸ್ತರ ಶೇಗಜಿ, ಅಂಬಾರಾವ ಉಪಳಾಂವಕರ, ಬಾಪುಗೌಡ ಮಾಲಿಪಾಟೀಲ, ಕಲ್ಯಾಣರಾವ ಪಾಟೀಲ, ಶ್ರೀಮಂತರಾವ ಸೋಮಜಾಳ, ಮಲ್ಲಿನಾಥ ಹೋಸಪೇಟೆ, ಚಂದ್ರಕಾಂತ ಪಾಟೀಲ, ಸಿದ್ದರಾಮ ಮಹಾಂತಗೋಳ, ಹಣಮಂತರಾವ ಅಟ್ಟೂರ, ಶಿವಪುತ್ರಪ್ಪ ಬೋರಾಳೆ ಮತ್ತಿತರರು ಭಾಗವಹಿಸಿದ್ದರು.ರಾಜಕುಮಾರ ಉದನೂರ ಸ್ವಾಗತಿಸಿದರು. ಬಾಲಚಂದ್ರ ನೆಲ್ಲೂರ ಭೂಸನೂರ ವಂದಿಸಿದರು. ಸಿದ್ಧರಾಮ ಯಳವಂತಗಿ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.