ಬಾರದ ಸರ್ಕಾರದ ಆದೇಶ: ಧರಣಿಗೆ ಮೊರೆ

7

ಬಾರದ ಸರ್ಕಾರದ ಆದೇಶ: ಧರಣಿಗೆ ಮೊರೆ

Published:
Updated:

ಗುಲ್ಬರ್ಗ: ಸರ್ಕಾರಿ ಪ್ರೌಢಶಾಲಾ ಮುಖ್ಯಗುರುಗಳ (ಕೆಇಎಸ್) 629 ಹುದ್ದೆಗಳ ನೇಮಕ  ಪ್ರಕ್ರಿಯೆ ಮುಗಿದು ನಾಲ್ಕೈದು ವರ್ಷವಾಗಿದ್ದರೂ, ಹುದ್ದೆಗಳ ಭರ್ತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.ಹಿನ್ನೆಲೆ: ಈ ಹುದ್ದೆಗಳ ನೇಮಕಕ್ಕಾಗಿ 2007ರ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಫೆಬ್ರುವರಿ 10, 2008ರಂದು ಪೂರ್ವಭಾವಿ ಪರೀಕ್ಷೆ ಕೂಡ ನಡೆಸಲಾಗಿತ್ತು. 1:20 ಪ್ರಮಾಣದಲ್ಲಿ ಒಟ್ಟು 12,580 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾದರು.ಡಿಸೆಂಬರ್ 13ರಂದು ಮುಖ್ಯ ಪರೀಕ್ಷೆ ನಡೆಸಲಾಯಿತು. 3,145 ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕಾಗಿ ಅರ್ಹರಾದರು. 2010 ಆಗಸ್ಟ್ 8ರಿಂದ ಆರಂಭವಾದ ಮೌಖಿಕ ಸಂದರ್ಶನ ಪ್ರಕ್ರಿಯೆ ಸೆಪ್ಟೆಂಬರ್ ತಿಂಗಳ ಕೊನೆವರೆಗೆ ಜರುಗಿತು. ನವೆಂಬರ್ ತಿಂಗಳಲ್ಲಿ ತಾತ್ಕಾಲಿಕ ಪಟ್ಟಿಯನ್ನು ಸಹ ಸಿದ್ಧಪಡಿಸಲಾಯಿತು.ಪರೀಕ್ಷೆ ನಡೆಸುವ ಹೊಣೆ ಹೊತ್ತ ಕರ್ನಾಟಕ ಲೋಕ ಸೇವಾ ಆಯೋಗವು ಫೆ, 22ರಂದು ಅಂತಿಮ ಪಟ್ಟಿ ಪ್ರಕಟಿಸಿ, ಅರ್ಹ ಅಭ್ಯರ್ಥಿಗಳಿಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಕೋರಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 17ರ ಗೆಜೆಟ್‌ನಲ್ಲೂ ಪ್ರಕಟಿಸಲಾಗಿತ್ತು.ಆದರೆ ಇಲ್ಲಿವರೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯೋಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಸರ್ಕಾರದ ಈ ವಿಳಂಬ ನೀತಿಗೆ ಬೇಸತ್ತ 629 ಅಭ್ಯರ್ಥಿಗಳು ಸೋಮವಾರದಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ಧರಣಿಗೆ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಸಂಚಾಲಕ ಎಂ.ಬಿ. ಅಂಬಲಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry