ಮಂಗಳವಾರ, ಮೇ 24, 2022
25 °C

ನಾಳೆಯಿಂದ ಗುಲ್ಬರ್ಗ ವಿವಿಯಲ್ಲಿ ಯುವಜನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿ ವರ್ಷದಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನ ಗಂಗಾ ಆವರಣದಲ್ಲಿ ಅ.13ರಿಂದ 15ರವರೆಗೆ ಮೂರು ದಿನಗಳ ಕಾಲ ಯುವಜನೋತ್ಸವ-2011 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಡಾ. ಕೆ. ಲಿಂಗಪ್ಪ ತಿಳಿಸಿದ್ದಾರೆ.ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ 13 ರಂದು ಬೆಳಿಗ್ಗೆ 10.30ಕ್ಕೆ ಜರುಗಲಿರುವ ಈ ಸಮಾರಂಭವನ್ನು ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಉದ್ಘಾಟಿಸಲಿದ್ದಾರೆ. ಕುಲಪತಿ ಪ್ರೊ. ಈ. ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ನಂತರ 14 ಮತ್ತು 15ರಂದು ವಿಜ್ಞಾನ ವಿಭಾಗದ ಬೋಸ್, ಬಾಬಾ, ಭಾಸ್ಕರ, ಪ್ಯಾಶ್ಚರ್ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಯುವಜನೋತ್ಸವದ ಯಶಸ್ವಿಗೆ ಹಲವು ಸಮಿತಿಗಳನ್ನು ರಚಿಸಲಾಗಿದೆ.

ಸಂಘಟನಾ ಸಮಿತಿ: ಪ್ರೊ.ಈ.ಟಿ. ಪುಟ್ಟಯ್ಯ (ಅಧ್ಯಕ್ಷ), ಡಾ. ಎಸ್.ಎಲ್. ಹಿರೇಮಠ (ಉಪಾಧ್ಯಕ್ಷ), ಡಾ. ಡಿ.ಬಿ. ನಾಯಕ , ಪ್ರೊ.ಬಿ.ಎಂ. ಕನ್ನೆಳ್ಳಿ, ಪ್ರೊ. ವಿ.ಎಚ್. ಮೂಲಿಮನಿ, ಡಾ. ಛಾಯಾದೇಗಾಂವಕರ, ಡಾ. ವೀರಣ್ಣ ದಂಡೆ, ಪ್ರೊ. ಎ.ಆರ್. ಏಕಬೋಟೆ, ಪ್ರೊ. ಎಸ್.ಎಸ್. ಪಾಟೀಲ, ಪ್ರೊ. ಬಿ. ವಿಜಯ, ಪ್ರೊ. ಕೆ.ಎಸ್. ವಾಲಿ, ಪ್ರೊ. ಎಸ್.ಪಿ. ಮೇಲಕೇರಿ, ಡಾ. ಶ್ರೀನಾಥರಾವ, ಎಂ.ಬಿ. ಸಜ್ಜನ, ಎಸ್. ಮಲ್ಲಿಕಾರ್ಜುನ, ಎಚ್.ಟಿ. ಸಂಗಣ್ಣ, ಶಂಕರ ವೈದ್ಯ(ಸದಸ್ಯರು), ಪ್ರೊ. ಕೆ. ಲಿಂಗಪ್ಪ (ಸಂಘಟನಾ ಕಾರ್ಯದರ್ಶಿ).ತಾಂತ್ರಿಕ ಸಮಿತಿ: ಪ್ರೊ.ಎಸ್.ಎಂ. ಗಡ್ಡದ (ಅಧ್ಯಕ್ಷ), ಪ್ರೊ. ರಮೇಶ ಅಂಗಡಿ, ಡಾ. ದೇವಿಂದ್ರಪ್ಪ ತೇಲ್ಕೂರ (ಸದಸ್ಯರು), ಪ್ರೊ.ಎನ್.ಬಿ. ನಡುವಿನಮನಿ (ಸಂಯೋಜಕ).ಆಮಂತ್ರಣ ಪತ್ರಿಕೆ,ಮಾಧ್ಯಮ ಸಮಿತಿ: ಡಾ. ಎಚ್.ಟಿ. ಪೋತೆ (ಅಧ್ಯಕ್ಷ), ಡಾ. ಕುಮಾರಸ್ವಾಮಿ, ಗುರು ಚವ್ಹಾಣ, ಶರಣು (ಸದಸ್ಯರು) ಪ್ರೊ. ಬಿ. ವಿಜಯಾ (ಸಂಯೋಜಕ).ಅದೇರೀತಿಯಾಗಿ ನೋಂದಣಿ ಮತ್ತು ಪ್ರಮಾಣ ಪತ್ರ, ಮೆರವಣಿಗೆ, ವೇದಿಕೆ, ಆರೋಗ್ಯ ಮತ್ತು ವೈದ್ಯಕೀಯ, ಶಿಸ್ತು, ಆಹಾರ ಮತ್ತು ವಸತಿ, ಸಂಗೀತ, ನೃತ್ಯ, ಸಾಂಸ್ಕೃತಿಕ ಸೇರಿದಂತೆ ಅನೇಕ ಬಗೆಯ ಸಮಿತಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕಮಾಡಲಾಗಿದೆ.ಗುಲ್ಬರ್ಗದ ಇನಾಮದಾರ ಬಿಸಿಎ ಡಿಗ್ರಿ ಕಾಲೇಜು, ಎಸ್.ಬಿ. ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು, ಗುಲ್ಬರ್ಗ ವಿರ್ಶವವಿದ್ಯಾಲಯದ ತಂಡ, ಎಂ.ಎಂ.ಕೆ. ಕಾಲೇಜು, ಎನ್.ವಿ. ಕಾಲೇಜು, ಎಲೈಟ್ ಸಂಸ್ಥೆಯ ಬಿಬಿಎಂ ಕಾಲೇಜು, ಸರ್ಕಾರಿ ಡಿಗ್ರಿ ಕಾಲೇಜು, ಸೇಡಂನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ನೃಪತುಂಗ ಕಾಲೇಜು, ಶಾಹಾಬಾದ್‌ನ ಕರ್ನಾಟಕ ಕಾಲೇಜು, ಎಸ್.ಎಸ್. ಮರಗೋಳ ಕಾಲೇಜು, ಆಳಂದನ ಎ.ವಿ. ಪಾಟೀಲ ಕಾಲೇಜು, ಬೀದರ್‌ನ ಕರ್ನಾಟಕ ಕಾಲೇಜು, ಲಿಂಗಸೂಗೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಸವೇಶ್ವರ ಕಲಾ ಕಾಲೇಜು ಸೇರಿದಂತೆ 20 ಕಾಲೇಜುಗಳ ಸುಮಾರು  300 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.