ನಕಲು ಅರ್ಜಿ ಮಾರಾಟ ಹಾವಳಿ

7

ನಕಲು ಅರ್ಜಿ ಮಾರಾಟ ಹಾವಳಿ

Published:
Updated:

ಹುಮನಾಬಾದ್:`ಆಧಾರ~ ನೋಂದಣಿ ಅರ್ಜಿಗಳನ್ನು ಸರ್ಕಾರ ಉಚಿತ ವಿತರಣೆ ಮಾಡುತ್ತಿರುವುದರ ಮಧ್ಯೆ ಪಟ್ಟಣದ ಕೆಲ ಖಾಸಗಿ ಅಂಗಡಿಗಳಲ್ಲಿ ಆಧಾರ ನಕಲು ಅರ್ಜಿ ಮಾರಾಟ ಆಗುತ್ತಿರುವುದು ಶನಿವಾರ ಬೆಳಕಿಗೆ ಬಂದಿದೆ.ಅರ್ಜಿಗಳು ನೋಡುವುದಕ್ಕೆ ಸರ್ಕಾರ ಉಚಿತ ವಿತರಿಸುತ್ತಿರುವ ಮಾದರಿ ಅರ್ಜಿಗಳೆ ಆಗಿದ್ದರೂ ಕೂಡ ನಕಲಿ ಎನ್ನುವುದನ್ನು ಪತ್ತೆ ಹಚ್ಚಲು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಖಚಿತ ಮಾಹಿತಿ ಮೇರೆಗೆ ಸುದ್ದಿಗಾರರು ಶನಿವಾರ ಮಧ್ಯಾಹ್ನ ಮಾರಾಟ ಆಗುತ್ತಿದ್ದ ಅಂಗಡಿಯಿಂದ ಕೊಂಚ ಅಂತರದಲ್ಲಿ ಕುಳಿತು ಬಾಲಕ ಒಬ್ಬನಿಗೆ ನೀಡಿ ಅರ್ಜಿ ತರಲು ಕಳಿಸಲಾಗಿತ್ತು. ಕ್ಷಣಾರ್ಧದದಲ್ಲಿ ಎರಡು ಅರ್ಜಿಗಳನ್ನು ಕೈಗೆ ತಂದಿಡುವ ಮೂಲಕ ಅಚ್ಚರಿ ಮೂಡಿಸಿದ.ಆರಂಭದಲ್ಲಿ ಸರ್ಕಾರ ಉಚಿತವಾಗಿ ವಿತರಿಸುತ್ತಿರುವ ಅರ್ಜಿ ಮಾರಾಟ ಆಗುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಕುರಿತು `ಪ್ರಜಾವಾಣಿ~ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದನ್ನು ಈಗ ಸ್ಮರಿಸಬಹುದು.ಈಗ ನಕಲಿ ಅರ್ಜಿ ರೂ. 2ರಿಂದ 5ಕ್ಕೆ ಒಂದರಂತೆ ಮಾರಾಟ ಆಗುತ್ತಿರುವ ವಿಷಯ ಮತ್ತೆ ಚರ್ಚೆಗೆ ಆಧಾರ ಒದಗಿಸಿಕೊಟ್ಟಿದೆ. ಅರ್ಜಿ ಈ ರೀತಿ ಖಾಸಗಿಯಾಗಿ ಮುದ್ರಿಸಿ ಮಾರಾಟ ಮಾಡಬಹುದೆ ಎಂಬ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಸಂಬಂಧಪಟ್ಟ ಮೇಲ ಧಿಕಾರಿಗಳು ಸಮಗ್ರ ತನಿಖೆ ಕೈಗೊಂಡು ಮಾರಾಟ ಆಗುವುದನ್ನು ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry