ಪೋಷಕರ ನಿಯಂತ್ರಣದಲ್ಲಿ ‘ಯುಟ್ಯೂಬ್ ಕಿಡ್ಸ್’

7

ಪೋಷಕರ ನಿಯಂತ್ರಣದಲ್ಲಿ ‘ಯುಟ್ಯೂಬ್ ಕಿಡ್ಸ್’

Published:
Updated:
ಯುಟ್ಯೂಬ್‌ ಕಿಡ್ಸ್‌

‘ಯುಟ್ಯೂಬ್‌’, ಈ ಪದ ಕೇಳಿದಾಕ್ಷಣ ಬಗೆ ಬಗೆ ವಿಡಿಯೊಗಳು ಮನಸ್ಸಿನ ಮುಂದೆ ನಿಲ್ಲುತ್ತವೆ. ಜಗತ್ತಿನ ಮೂಲೆ ಮೂಲೆಯಲ್ಲಿನ ವಿಡಿಯೊಗಳು ಯುಟ್ಯೂಬ್‌ನಲ್ಲಿ ಕಾಣಸಿಗುತ್ತವೆ.

ಯುಟ್ಯೂಬ್‌ ಕಿಡ್ಸ್‌ ಮಕ್ಕಳಿಗೆಂದೇ ಮೀಸಲಾದ ಒಂದು ವಿಭಾಗ. ಆದರೆ, ಮಕ್ಕಳು ನೋಡಬಾರದ ವಿಡಿಯೊಗಳನ್ನು ಇದರಲ್ಲಿ ಹರಿಬಿಡಲಾಗುತ್ತಿತ್ತು ಎಂಬ ಆರೋಪವನ್ನು ಸಾಕಷ್ಟು ಪೋಷಕರು ಮಾಡಿದ್ದರು. ಇದೀಗ ಇದಕ್ಕೊಂದು ಪರಿಹಾರವನ್ನು ಯುಟ್ಯೂಬ್‌ ಕಂಡುಕೊಂಡಿದೆ. ಮಕ್ಕಳ ವಿಡಿಯೊಗಳು ಪೋಷಕರ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಗಮನಾರ್ಹ ಸಂಖ್ಯೆಯ ವಿಡಿಯೊಗಳಲ್ಲಿ ಮಕ್ಕಳಿಗೆ ತಕ್ಕುದಲ್ಲದ ಕೆಲವು ವಿಡಿಯೊಗಳು ಪೋಷಕರ ನಿದ್ದೆಗೆಡಿಸಿದ್ದವು. ಇದೀಗ ಈ ಎಲ್ಲದಕ್ಕೂ ತಡೆಬಿದ್ದಿದೆ.

ಈ ಕ್ರಮದಿಂದಾಗಿ ಪೋಷಕರು ಕೇವಲ ‘ನಂಬಿಕೆಯ ಚಾನಲ್‌ಗಳನ್ನು’ ಮಾತ್ರವೇ ಆಯ್ಕೆ ಮಾಡಿಕೊಳ್ಳಬಹುದು. ಇವುಗಳನ್ನು ಮಕ್ಕಳು ನೋಡಬಹುದೇ ಇಲ್ಲವೇ ಎಂಬುದರ ಪರಾಮರ್ಶೆಯ ನಂತರವೇ ನೋಡಲು ಅವಕಾಶ ನೀಡಲಾಗುತ್ತದೆ.

ಯುಟ್ಯೂಬ್‌ ಕಿಡ್ಸ್ ಅನ್ನು ಮಕ್ಕಳಿಗಾಗಿ 2015ರಲ್ಲಿ ಪರಿಚಯಿಸಲಾಯಿತು. ಸದ್ಯ ಇದಕ್ಕೀಗ 1.1 ಕೋಟಿ ವೀಕ್ಷಕರು (ಪ್ರತಿ ವಾರಕ್ಕೆ) ಇದ್ದಾರೆ. ಯುಟ್ಯೂ‌ಬ್‌ ಮಕ್ಕಳಿಗಾಗಿ ಪರಿಚಯಿಸಿರುವ ಹೊಸ ಮೂರು ಅವಕಾಶಗಳೆಂದರೆ ಸಂಗ್ರಹ, ಪೋಷಕರ ಒಪ್ಪಿಗೆಯ ಅಂಶಗಳು ಮತ್ತು ಶೋಧಕ್ಕಿರುವ ಅವಕಾಶ. ಈ ಸಂಗ್ರಹದಲ್ಲಿ ಕ್ರಾಫ್ಟ್ಸ್‌, ಕ್ರೀಡೆ, ಸಂಗೀತ ಮತ್ತು ಕಲಿಕೆಯ ಅಂಶಗಳು ಸೇರಿವೆ. ಯುಟ್ಯೂಬ್‌ ಕಿಡ್ಸ್ ತಂಡ ನಿಗದಿ ಮಾಡಿದ ವಿಡಿಯೊವನ್ನು ಮಾತ್ರವೇ ಮಕ್ಕಳು ನೋಡಬೇಕಾಗಿದೆ. ಹೊಸ ವಿಡಿಯೊಗಳಿಗಾಗಿ ಇರುವ ಹುಡುಕುವ ಅವಕಾಶದಲ್ಲಿ ಹೊಸ ಹೊಸ ರೀತಿಯ ವಿಡಿಯೊವನ್ನೂ ಪರಿಶೀಲನೆಯ ನಂತರವೇ ನೋಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !