ಮೊರೊಕ್ಕೊಗೆ ಮುಳುವಾದ ರೊನಾಲ್ಡೊ

7
ಹೆಚ್ಚು ಗೋಲು ಗಳಿಸಿದ ‘ಯೂರೋಪ್‌ ಆಟಗಾರ’

ಮೊರೊಕ್ಕೊಗೆ ಮುಳುವಾದ ರೊನಾಲ್ಡೊ

Published:
Updated:
ಕ್ರಿಸ್ಟಿಯಾನೋ ರೊನಾಲ್ಡೊ

ಮಾಸ್ಕೊ: ಫುಟ್‌ಬಾಲ್‌ ಲೋಕದ ಮಿನುಗುತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಹೆಡರ್‌ ಮೂಲಕ ಗಳಿಸಿದ ಗೋಲಿನ ನೆರವಿನಿಂದ ಪೋರ್ಚುಗಲ್ ತಂಡ ಮೊರೊಕ್ಕೊ ವಿರುದ್ಧದ ಪಂದ್ಯದಲ್ಲಿ 1–0 ಗೋಲು ಅಂತರದಿಂದ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಪೋರ್ಚುಗಲ್‌ ತಂಡ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮೊದಲ ಜಯದ ಸವಿಯುಂಡಿತು. ಸ್ಪೇನ್‌ ವಿರುದ್ಧದ ಮೊದಲ ಪಂದ್ಯ 3–3 ಗೋಲುಗಳ ಅಂತರದ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು.

ಪಂದ್ಯದ ನಾಲ್ಕನೇ ನಿಮಿಷದಲ್ಲಿ ದಾಖಲಾದ ಏಕೈಕ ಗೋಲಿನ ರೂವಾರಿ ರೊನಾಲ್ಡೊ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಹೆಚ್ಚು ಗೋಲುಗಳನ್ನು ಗಳಿಸಿದ ಯರೋಪ್‌ ಆಟಗಾರ ಎಂಬ ಶ್ರೇಯ ಗಳಿಸಿದರು.

1945–56ರ ಅವಧಿಯಲ್ಲಿ ಹಂಗೆರಿ ತಂಡ, 1961–62ರಲ್ಲಿ ಸ್ಪೇನ್‌ ತಂಡದ ಪರ ಕಣಕ್ಕಿಳಿದಿದ್ದ ಫೆರೆನ್ಸ್ ಪುಸ್ಕಾಸ್ ಅವರು ಒಟ್ಟು 84 ಗೋಲು ದಾಖಲಿಸಿದ್ದರು. ಒಟ್ಟು 89 ಪಂದ್ಯಗಳನ್ನ ಆಡಿದ್ದ ಪುಸ್ಕಾಸ್ ಹೆಚ್ಚು ಗೋಲುಗಳನ್ನು ಗಳಿಸಿದ ಯರೋಪ್‌ ಆಟಗಾರ ಎನಿಸಿಕೊಂಡಿದ್ದರು.

ಸದ್ಯ 152 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪೋರ್ಚುಗಲ್‌ ಪರ ಆಡಿರುವ ರೊನಾಲ್ಡೋ ಒಟ್ಟು 85 ಗೋಲು ಗಳಿಸಿದ್ದಾರೆ. ಸ್ಪೇನ್‌ ಎದುರು ಹ್ಯಾಟ್ರಿಕ್‌ ಗೋಲು ಗಳಿಸಿದ್ದ ರೊನಾಲ್ಡೊ ಎರಡು ಪಂದ್ಯಗಳಿಂದ ಒಟ್ಟು ನಾಲ್ಕು ಗೋಲುಗಳನ್ನು ಸಿಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !