ಪ್ರಚೋದನಕಾರಿ ಹೇಳಿಕೆಯಿಂದ ಸಮುದಾಯಗಳ ನಡುವೆ ಒಡಕು: ಸೂಕಿ

7
ಮ್ಯಾನ್ಮಾರ್‌ನ ಹಿರಿಯ ನಾಯಕಿ

ಪ್ರಚೋದನಕಾರಿ ಹೇಳಿಕೆಯಿಂದ ಸಮುದಾಯಗಳ ನಡುವೆ ಒಡಕು: ಸೂಕಿ

Published:
Updated:

ಯಾಗೂಂನ್ (ರಾಯಿಟರ್ಸ್‌): ‘ವಿದೇಶಗಳಿಂದ ದ್ವೇಷಪೂರಿತ ಮತ್ತು ಪ್ರಚೋದನಕಾರಿ ಹೇಳಿಕೆಗಳು ಮ್ಯಾನ್ಮಾರ್‌ನ ಸಮುದಾಯಗಳ ನಡುವೆ ಮತ್ತಷ್ಟು ಒಡಕು ಹುಟ್ಟಿಸುತ್ತಿವೆ’ ಎಂದು ಮ್ಯಾನ್ಮಾರ್‌ನ ಹಿರಿಯ ನಾಯಕಿ ಆಂಗ್‌ ಸಾನ್‌ ಸೂಕಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಸಮುದಾಯಗಳ ನಡುವೆ ನಂಬಿಕೆಯನ್ನು ಮತ್ತೆ ಸ್ಥಾಪಿಸಲು ತಾಳ್ಮೆ ಹಾಗೂ ಸಾಕಷ್ಟು ಸಮಯದ ಅಗತ್ಯವಿದೆ ಎಂದು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮನ್ನು ಭೇಟಿಯಾದ ವಿಶ್ವಸಂಸ್ಥೆಯ ಮ್ಯಾನ್ಮಾರ್‌ನ ವಿಶೇಷ ರಾಯಭಾರಿ ಸ್ಕ್ರೇನರ್‌ ಬರ್ಗೆನರ್‌ ಅವರಿಗೂ ಇದೇ ವಿಷಯವನ್ನು ತಿಳಿಸಿದ್ದಾರೆ.

‘ಕಳೆದ ಆಗಸ್ಟ್‌ನಿಂದ ಮ್ಯಾನ್ಮಾರ್‌ನ ಉತ್ತರಭಾಗದಿಂದ ಸುಮಾರು 70 ಸಾವಿರ ರೋಹಿಂಗ್ಯಾ ಮುಸಲ್ಮಾನರು ರಖೈನ್‌ ಪ್ರಾಂತ್ಯದಿಂದ ಬಾಂಗ್ಲಾದೇಶಕ್ಕೆ  ವಲಸೆ ಹೋಗಿದ್ದಾರೆ. ಇದಕ್ಕೆ ಬೌದ್ಧ ಸಮುದಾಯದ ದಾಳಿ ಹಾಗೂ ಸೇನಾ ಕಾರ್ಯಾಚರಣೆಯೇ ಕಾರಣ. ಈ ವೇಳೆ ಅನೇಕರ ಮೇಲೆ ಹತ್ಯೆ, ಅತ್ಯಾಚಾರಗಳು ’ ನಡೆದಿದ್ದವು ಎಂದು ವಿಶ್ವಸಂಸ್ಥೆ ತಿಳಿಸಿತ್ತು.

‘ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಡಿ ಇಡಬೇಕು’ ಎಂದು ಅವರು ಇದೇ ವೇಳೆ ಮನವಿ ಮಾಡಿದ್ದಾರೆ.

ಸೂಕಿ ಹೇಳಿಕೆ ಕುರಿತಂತೆ ಮ್ಯಾನ್ಮಾರ್‌ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !