ಡಬ್ಬಿಂಗ್‌ ಮುಗಿಸಿದ ‘ಕುರುಕ್ಷೇತ್ರ’

7

ಡಬ್ಬಿಂಗ್‌ ಮುಗಿಸಿದ ‘ಕುರುಕ್ಷೇತ್ರ’

Published:
Updated:
‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದುರ್ಯೋಧನ ಪಾತ್ರಧಾರಿ ದರ್ಶನ್

ಚಂದನವನದ ಬಹುತೇಕ ನಟ, ನಟಿಯರು ಒಟ್ಟಾಗಿ ನಟಿಸಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ 3ಡಿ ಡಬ್ಬಿಂಗ್‌ ಕಾರ್ಯ ಮುಕ್ತಾಯಗೊಂಡಿದೆ. ನಟ ನಿಖಿಲ್‌ ಕುಮಾರಸ್ವಾಮಿ ಅವರ ಡಬ್ಬಿಂಗ್‌ ಹೊರತುಪಡಿಸಿ ಉಳಿದ ಎಲ್ಲ ಕಲಾವಿದರು ಆಕಾಶ್‌ ಸ್ಟುಡಿಯೊದಲ್ಲಿ ನಡೆದ ಡಬ್ಬಿಂಗ್‌ನಲ್ಲಿ ಪಾಲ್ಗೊಂಡಿದ್ದರು.‌ 

ವೃಷಭಾದ್ರಿ ಪ್ರೋಡಕ್ಷನ್ ಲಾಂಛನದಡಿ ಶಾಸಕ ಮುನಿರತ್ನ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಶೇ 40ರಷ್ಟು ಭಾಗ ಗ್ರಾಫಿಕ್ಸ್‌ನಿಂದ ಕೂಡಿದೆ. 2ಡಿ, 3ಡಿ ಮಾದರಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಆರಂಭದಲ್ಲಿ ಈ ಚಿತ್ರದ ಶೀರ್ಷಿಕೆಯು ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ‘ಮುನಿರತ್ನ ಕುರುಕ್ಷೇತ್ರ’ ಎಂದು ಹೆಸರಿಡಲಾಯಿತು. ಅದ್ದೂರಿ ವೆಚ್ಚದಡಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಜುಲೈನಲ್ಲಿ ನಡೆಯಲಿದೆ.

ಈ ಚಿತ್ರದ ನಿರ್ದೇಶಕ ನಾಗಣ್ಣ. ಚಿತ್ರಕ್ಕೆ ಮುನಿರತ್ನ ಕಥೆ, ಜಿ.ಕೆ. ಭಾರವಿ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಜಯನನ್‌ ವಿನ್ಸೆಂಟ್‌ ಅವರ ಛಾಯಾಗ್ರಹಣವಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್‌ ಸಾಹಿತ್ಯ ನೀಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಅವರ ಸಾಹಸ ಚಿತ್ರಕ್ಕಿದೆ.

ಕರ್ಣನಾಗಿ ಅರ್ಜುನ್‌ ಸರ್ಜಾ, ಕೃಷ್ಣನಾಗಿ ರವಿಚಂದ್ರನ್‌ ನಟಿಸಿದ್ದಾರೆ. ಭಾನುಮತಿ ಪಾತ್ರದಲ್ಲಿ ಮೇಘನಾರಾಜ್, ಭೀಷ್ಮನಾಗಿ ಅಂಬರೀಷ್‌ ಮತ್ತು ಕುಂತಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

ಉಳಿದಂತೆ ಶಶಿಕುಮಾರ್ (ಧರ್ಮರಾಯ), ಡ್ಯಾನಿಶ್ ಅಖ್ತರ್ (ಭೀಮ), ಸೋನು ಸೂದ್ (ಅರ್ಜುನ), ಯಶಸ್‍ಸೂರ್ಯ (ನಕುಲ), ಚಂದನ್ (ಸಹದೇವ), ನಿಖಿಲ್‍ ಕುಮಾರಸ್ವಾಮಿ (ಅಭಿಮನ್ಯು), ರವಿಶಂಕರ್ (ಶಕುನಿ), ಸ್ನೇಹಾ (ದ್ರೌಪದಿ), ರಾಕ್‍ಲೈನ್ ವೆಂಕಟೇಶ್ (ಶಲ್ಯ), ರಮೇಶ್‍ ಭಟ್ (ವಿದುರ), ಶ್ರೀನಿವಾಸಮೂರ್ತಿ (ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ರವಿಚೇತನ್ (ದುಶ್ಯಾಸನ), ಅವಿನಾಶ್ (ಗಂಗಾಧರರಾಜ), ಪವಿತ್ರಾ ಲೋಕೇಶ್ (ಸುಭದ್ರಾ) ಹಾಗೂ ನಟಿ ಹರಿಪ್ರಿಯಾ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !