ಕಾಪ್ಟರ್‌ನಲ್ಲಿ ಬಂದ ಉಪ್ಪಿ

7

ಕಾಪ್ಟರ್‌ನಲ್ಲಿ ಬಂದ ಉಪ್ಪಿ

Published:
Updated:
‘ಐ ಲವ್‌ ಯು’ ಚಿತ್ರದಲ್ಲಿ ಉಪೇಂದ್ರ

ಆರ್‌. ಚಂದ್ರು ನಿರ್ದೇಶನದ ‘ಬ್ರಹ್ಮ’ ಚಿತ್ರದಲ್ಲಿ ನಟ ಉಪೇಂದ್ರ ನಟಿಸಿದ್ದರು. ಈ ಜೋಡಿ ಈಗ ಮತ್ತೊಮ್ಮೆ ಒಂದಾಗಿದ್ದು, ಅಭಿಮಾನಿಗಳಿಗೆ ‘ಐ ಲವ್ ಯು’ ಹೇಳಲು ಹೊರಟಿದೆ. 

‘ಐ ಲವ್‌ ಯು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನ ನೈಸ್ರ ಸ್ತೆಯಲ್ಲಿ ನಡೆಯುತ್ತಿದೆ. ಉಪೇಂದ್ರ ಹೆಲಿಕಾಪ್ಟರ್ ಮೂಲಕ ಆಗಮಿಸುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಚಂದ್ರು ಅವರು ನಿರ್ದೇಶನದ ಜೊತೆಗೆ ಬಂಡವಾಳ ಕೂಡ ಹೂಡಿದ್ದಾರೆ.

‘ಉಪೇಂದ್ರ ಅವರನ್ನು ದೊಡ್ಡ ಉದ್ಯಮಿ ಸಂತೋಷ್‍ ನಾರಾಯಣ್ ಆಗಿ ಪರಿಚಯಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಸನ್ನಿವೇಶದ ಬಳಿಕ ಆ್ಯಕ್ಷನ್ ಇರಲಿದೆ. ಬಾಂಬೆಯಿಂದ ಪರಿಣತ ಪೈಟರ್‌ಗಳನ್ನು ಕರೆಯಿಸಿ ಬೆಂಗಳೂರಿನ ಅರಮನೆ ಮುಂಭಾಗ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು. ತಾಂತ್ರಿಕವಾಗಿ ಉಪ್ಪಿ ಸರ್ ಸಾಕಷ್ಟು ಸಲಹೆ ನೀಡುತ್ತಿದ್ದಾರೆ. 60 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ರೂಪಿಸಲಾಗಿದೆ’ ಎಂಬುದು ಚಂದ್ರು ಅವರ ವಿವರಣೆ.

‘ವಿಭಿನ್ನವಾಗಿ ಫೋಟೊಶೂಟ್‍ ಮಾಡಲಾಗಿದೆ. ದೊಡ್ಡ ಉದ್ಯಮಿ ಆಗಿರುವ ಕಾರಣ ಅದ್ದೂರಿಯಾಗಿ ತೋರಿಸಲು ನಿರ್ದೇಶಕರು ಶ್ರಮಪಟ್ಟಿದ್ದಾರೆ. ಅವರ ಶ್ರಮಕ್ಕೆ ಬೇರೇನೂ ಹೇಳಲಾಗದು’ ಎಂದು ಚಂದದ ನಗು ಚೆಲ್ಲಿದರು ನಟ ಉಪೇಂದ್ರ. ಚಿತ್ರೀಕರಣದಲ್ಲಿ ‘ಟಗರು’ ಚಿತ್ರದ ಖ್ಯಾತಿಯ ತ್ರಿವೇಣಿ ಪಾಲ್ಗೊಂಡಿದ್ದರು.

ಈ ಚಿತ್ರಕ್ಕೆ ಸುಜ್ಞಾನ್‌ಮೂರ್ತಿ ಛಾಯಾಗ್ರಹಣ ಇದೆ. ಸಾಹಸ ನಿರ್ದೇಶನ ವಿನೋದ್‌ ಅವರದ್ದು. ಚಿತ್ರದ ನಾಯಕಿಯಾಗಿ ರಚಿತಾ ರಾಮ್. ರವಿಶಂಕರ್, ರವಿ ಕಾಳೆ, ಸಾಧುಕೋಕಿಲ, ಅಚ್ಯುತಕುಮಾರ್, ಶಯ್ಯಾಜಿರಾವ್ ಶಿಂಧೆ ತಾರಾಗಣದಲ್ಲಿದ್ದಾರೆ. ಕನ್ನಡದಲ್ಲಿ ಶ್ರೀಸಿದ್ದೇಶ್ವರ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ ಗೋನಾಲ್‌ ಜಿ. ವೆಂಕಟೇಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !