ಇನ್‌ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ವಿಡಿಯೋ ಹಂಚಿಕೊಂಡ ನಿಕ್‌

7

ಇನ್‌ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ವಿಡಿಯೋ ಹಂಚಿಕೊಂಡ ನಿಕ್‌

Published:
Updated:
Mumbai: Bollywood actor Priyanka Chopra and American singer-songwriter Nick Jonas spotted at Yauatcha restaurant, in BKC, Mumbai on Friday, June 22, 2018. (PTI Photo) (PTI6_23_2018_000097B)

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಸಿಂಗರ್‌ ನಿಕ್‌ ಜೋನಾಸ್‌ ಅವರಿಬ್ಬರು ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡಿತ್ತು. ಈಗ ಈ ಸುದ್ದಿಯನ್ನು ನಿಜ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಮಳೆಗೆ ನೆನೆಯುತ್ತಾ ಆನಂದಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಿಕ್‌ ಜೋನಾಸ್‌.

ಈ ವಿಡಿಯೋವನ್ನು 31 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ವೈರಲ್‌ ಆಗಿದೆ. ಇದಲ್ಲದೇ ಮುಂಬೈನ ಹೋಟೆಲ್‌ವೊಂದಕ್ಕೆ ನಿಕ್‌ ಜೊತೆ ಪಿಗ್ಗಿ ರಾತ್ರಿಯೂಟಕ್ಕೆ ತೆರಳಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಇದೆ. ಪಿಗ್ಗಿ ಕಾರಿನಲ್ಲಿಯೇ ಇಬ್ಬರು ಮುಂಬೈನ ಹೋಟೆಲ್‌ಗೆ ಬಂದಿದ್ದರು. ಪ್ರಿಯಾಂಕಾ ಹಾಗೂ ನಿಕ್‌ ಇಬ್ಬರು ಪರಸ್ಪರ ಕೈ ಹಿಡಿದುಕೊಂಡು ಮಾಧ್ಯಮದವರಿಗೆ ಕಾಣಿಸಿಕೊಂಡರು.

ಇದಾದ ಬಳಿಕ ನಿಕ್‌ ಜೊನಾಸ್‌ ಅವರು ಪ್ರಿಯಾಂಕಾ ಚೋಪ್ರಾ ಮಳೆಯಲ್ಲಿ ನೆನೆಯುತ್ತಾ ನಡೆದಿರುವ ವಿಡಿಯೋವನ್ನು ಹಂಚಿಕೊಂಡು, ‘ಅವಳು’ ಎಂದು ಹೃದಯದ ಚಿಹ್ನೆಯ ಇಮೋಜಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !