7
ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಆಲಿಸಿದ ವಸತಿ ಸಚಿವರು

ವಸತಿ ಸಮಸ್ಯೆಗಳಿಗೆ ಸಹಾಯವಾಣಿ: ಖಾದರ್‌

Published:
Updated:

ಬೆಂಗಳೂರು: ‘ವಸತಿ ಇಲಾಖೆಯಲ್ಲಿನ ಸಮಸ್ಯೆಗಳು ಹಾಗೂ ದೋಷಗಳ ಕುರಿತು ಮಾಹಿತಿಪಡೆಯಲು, ದೂರು ದಾಖಲಿಸುವ ಉದ್ದೇಶದಿಂದ ಉಚಿತ ಕರೆ ಸಂಖ್ಯೆಯನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ವಸತಿ ಸಚಿವ ಯು.ಟಿ. ಖಾದರ್ ಹೇಳಿದರು.

ವಸತಿ ಯೋಜನೆಗಳ ಅನುಷ್ಠಾನ ಹಾಗೂ ತಳಮಟ್ಟದ ಕುಂದುಕೊರತೆಗಳನ್ನು ಆಲಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ಅಧ್ಯಕ್ಷರ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಾವು ವೇದಿಕೆ ಒದಗಿಸಿದ್ದೆವು. ಇದರಿಂದ ನಮಗೆ ಹಲವಾರು ಮೂಲ ಸಮಸ್ಯೆಗಳ ಪರಿಚಯ ಆಯಿತು. ಅಲ್ಲದೇ ಗ್ರಾಮಪಂಚಾಯತಿಗಳ ಮಟ್ಟದಲ್ಲಿ ಸಾಕಷ್ಟು ಕುಂದುಕೊರತೆಗಳು ಇವೆ. ಇವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ’ ಎಂದರು.

‘ಕೆಲವು ತಾಲ್ಲೂಕುಗಳಲ್ಲಿ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಸಹಾಯವಾಣಿಯಿಂದ ಸಾಕಷ್ಟು ಅನುಕೂಲ ಆಗಲಿದೆ. ಮನೆಗಳಿಗಾಗಿ ಇಂದಿರಾ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಬಹುದು. ಒಂದು ವಾರದಲ್ಲಿ ಹಂಚಿಕೆಯ ಆದೇಶ ತಲುಪಲಿದೆ. ಫಲಾನುಭವಿಗಳ ಪಟ್ಟಿಯಲ್ಲಿ ದೋಷ ಇರುವ ಆರೋಪ ಕೇಳಿಬಂದಿದೆ. ಅದನ್ನು ಸರಿಪಡಿಸಲು ಚಿಂತಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು 24ರವರೆಗೆ ಸಮಯ ಇತ್ತು. ಬೇಡಿಕೆಯ ಮೇರೆಗೆ ಜೂನ್‌ 30ರವರೆಗೂ ಅವಕಾಶ ನೀಡಲಾಗಿದೆ’ ಎಂದರು.

‘ಹೋಬಳಿ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !