ಪ್ರಾಣಾಪಾಯದಲ್ಲಿದ್ದ ಕೋತಿಗಳ ರಕ್ಷಣೆ

7
ಮುತ್ತಾಳ ಗ್ರಾಮದ ಹಳ್ಳದ ಬಳಿ ನಡೆದ ಘಟನೆ

ಪ್ರಾಣಾಪಾಯದಲ್ಲಿದ್ದ ಕೋತಿಗಳ ರಕ್ಷಣೆ

Published:
Updated:
30junkkn01: ಕುಕನೂರು ತಾಲ್ಲೂಕಿನ ಮುತ್ತಾಳ ಗ್ರಾಮದಲ್ಲಿ ಯುವಕರು ಕೋತಿಗಳನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡುತ್ತಿರುವುದು

ಕುಕನೂರು: ತಾಲ್ಲೂಕಿನ ಮುತ್ತಾಳ ಗ್ರಾಮದ ಬಳಿ ಪ್ರಾಣಾಪಾಯದಲ್ಲಿದ್ದ 3 ಕೋತಿಗಳನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.

15 ದಿನಗಳ ಹಿಂದೆ ಜಮೀನುಗಳಲ್ಲಿ ಅಲಸಂದಿ ಬೆಳೆಯನ್ನು ತಿನ್ನಲು ಬಂದಿದ್ದ ಕೋತಿಗಳು, ಏಕಾಏಕಿ ವರುಣ ಅಬ್ಬರಿಸಿದ್ದರಿಂದ ಐದು ತಾಸು ಮಳೆಯಾಗಿ ಹಳ್ಳಕ್ಕೆ ಪ್ರವಾಹಪೋದಿಯಲ್ಲಿ ನೀರು ಬಂದಿತು. ರಕ್ಷಣೆಗೆ ಮರವೇರಿ ಕುಳಿತ ಕೋತಿಗಳು ಜಲಾವೃತಗೊಂಡ ಜಮೀನಿನಿಂದ ಹೊರ ಬರದೆ ಪರದಾಡುತ್ತಿದ್ದವು. 

ಒಂದೇ ಮರದಲ್ಲಿ ಮೂರು ವಾರ ಕುಳಿತ ಕೋತಿಗಳ ಹಿಂಡನ್ನು ನೋಡಿ ಸಂಶಯಗೊಂಡು, ತೆಪ್ಪದ ಮೂಲಕ ಹತ್ತಿರ ಹೋದಾಗ ಆಹಾರ ಇಲ್ಲದೆ, ಅಸ್ವಸ್ಥ ಸ್ಥಿತಿಯಲ್ಲಿರುವುದು ಪತ್ತೆಯಾಯಿತು. ಇದನ್ನು ಕಂಡ ಯುವಕರು ಮರುಗಿ ದಿನ ನಿತ್ಯ ಅವುಗಳಿಗೆ ಬಾಳೆ ಹಣ್ಣು, ಶೇಂಗಾ ಮುಂತಾದ ಆಹಾರಗಳನ್ನು ಪ್ರತಿದಿನ ಮರದ ಮೇಲೆ ಹೋಗಿ ನೀಡುತ್ತಾ ಬಂದಿದ್ದು, ಯುವಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಈ ಘಟನೆಯನ್ನು ಕಣ್ಣಾರೆ ಕಂಡ ಯುವಕರಾದ ಶಿವನಗೌಡ, ಮಲ್ಲಪ್ಪ, ಬಸವರಾಜ, ರಾಜಪ್ಪ, ಶಿವುಕುಮಾರ, ಆನಂದ ಗ್ರಾಮದಲ್ಲಿ ವಿಷಯ ತಿಳಿಸಿ, ಅವುಗಳಿಗೆ ನಿತ್ಯ ತೆಪ್ಪದ ಮೂಲಕ ತೆರಳಿ ಆಹಾರವನ್ನು ನೀಡಿ ರಕ್ಷಿಸಿದ್ದಾರೆ. ಮಂಗ ಹನಮಂತನ ಅವತಾರ. ಅಲ್ಲದೆ ಕಷ್ಟದಲ್ಲಿ ಇರುವ ಜೀವಿಯ ಅಸಹಾಯಕ ಪರಿಸ್ಥಿತಿಯನ್ನು ಕಂಡು ಮನಸ್ಸು ಮರುಗಿತು. ಅವುಗಳನ್ನು ರಕ್ಷಣೆ ಮಾಡಿದ ಸಾರ್ಥಕತೆ ನಮಗೆ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಒಂದೆ ಮರದಲ್ಲಿದ್ದ ಚಿಗುರು ಎಲೆಗಳನ್ನು ತಿಂದು ಜೀವ ಹಿಡಿದುಕೊಂಡಿದ್ದವು. ಭಯದಿಂದ ಕೆಳಗೆ ಬರಲೂ ಆಗದೆ, ನಡೆಯಲು ಆಗದೆ ಮಂಕಾಗಿ ಕುಳಿತಿದ್ದವು. ಅವುಗಳಿಗೆ ದಿನನಿತ್ಯ ಆಹಾರ ನೀಡಿ, ನೀರು ಕಡಿಮೆ ಆದ ಬಳಿಕ ಅವುಗಳನ್ನು ಮರದಿಂದ ಯುವಕರು ಕೆಳಗೆ ಇಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಯುವಕರ ಈ ಮಾದರಿ ಕಾರ್ಯಕ್ಕೆ ಗ್ರಾಮಸ್ಥರು, ಅರಣ್ಯ ಇಲಾಖೆ, ಪರಿಸರ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !