ಹಜ್ ಯಾತ್ರೆ ತ್ಯಾಗದ ಪ್ರತೀಕ

7
ಬೈರಿಕಟ್ಟೆ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ಹಜ್ ತರಬೇತಿ ಶಿಬಿರ

ಹಜ್ ಯಾತ್ರೆ ತ್ಯಾಗದ ಪ್ರತೀಕ

Published:
Updated:
ವಿಟ್ಲ ಸಮೀಪದ ಬೈರಿಕಟ್ಟೆ ಮುನವ್ವಿರುಲ್ ಇಸ್ಲಾಂ ಮದ್ರಸದಲ್ಲಿ ನಡೆದ ಹಜ್ ತರಬೇತಿ ಶಿಬಿರದಲ್ಲಿ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬೈರಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.

ವಿಟ್ಲ: ಜಲಾಲಿಯಾ ಜುಮಾ ಮಸೀದಿ ಬೈರಿಕಟ್ಟೆ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ ಬೈರಿಕಟ್ಟೆ ಜಂಟಿ ಆಶ್ರಯದಲ್ಲಿ ಹಜ್ ತರಬೇತಿ ಶಿಬಿರ ಬೈರಿಕಟ್ಟೆ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ಶನಿವಾರ ನಡೆಯಿತು.

ಮಹ್ಮೂದುಲ್ ಫೈಝಿ ವಾಲೆಮುಂಡೋವು ಉದ್ಘಾಟಿಸಿ ಮಾತನಾಡಿ ‘ಹಜ್ ಯಾತ್ರೆ ತ್ಯಾಗದಿಂದ ಕೂಡಿದೆ. ಅಲ್ಲಾಹ್‌ಗೆ ಪ್ರತಿಯೊಬ್ಬರು ಅನುಸರಿಸುವ ಕಾರ್ಯವಾಗಿದೆ. ಒಂದೇ ಸ್ಥಳದಲ್ಲಿ ಪ್ರಪಂಚದ ಎಲ್ಲರೂ ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸುವ ಕಾರ್ಯ ಹಜ್ ಯಾತ್ರೆಯಿಂದ ಮಾತ್ರ ಸಾಧ್ಯ. ಹಜ್ ಯಾತ್ರಿಕರಿಗೆ ಶಿಬಿರ ಮೂಲಕ ಮಾರ್ಗದರ್ಶನ ನೀಡುವುದು ಪುಣ್ಯ ಕಾರ್ಯವಾಗಿದೆ’ ಎಂದರು.

ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಸದಸ್ಯ ರಶೀದ್ ವಿಟ್ಲ ಮಾತನಾಡಿ ‘ಹಜ್ ಯಾತ್ರಿಕರಿಗೆ ಜುಲೈ 7ಕ್ಕೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಶಿಬಿರವನ್ನು ಆಯೋಜಿಸಲಾಗಿದೆ. ವಿಶ್ವದ 40ರಿಂದ 50 ಲಕ್ಷ ಮಂದಿ ಹಜ್ ಯಾತ್ರೆ  ಮಾಡಿದರೆ, ದೇಶದ 1.75 ಲಕ್ಷ ಮಂದಿ ಪ್ರತಿವರ್ಷ ಯಾತ್ರೆ ತೆರಳುತ್ತಾರೆ’ ಎಂದು ತಿಳಿಸಿದರು.

ಮಸೀದಿ ಅಧ್ಯಕ್ಷ ಅಬೂಬಕ್ಕರ್ ಬೈರಿಕಟ್ಟೆ, ಯೂಸುಫ್ ಕಾಡುಮನೆ, ಇಸ್ಮಾಯಿಲ್ ಡಿ. ದೇಲಂತಬೆಟ್ಟು, ಯೂಸುಫ್ ಮುಸ್ಲಿಯಾರ್ ಸೇರಾಜೆ, ಉಸ್ಮಾನ್ ಹಾಜಿ ಕರೋಪಾಡಿ, ರಶೀದ್ ವಿಟ್ಲ, ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಬೈರಿಕಟ್ಟೆ ಜುಮಾ ಮಸೀದಿ ಖತೀಬ್‌ ಎನ್.ಎ ಅಬ್ದುರ್ರಹ್ಮಾನ್ ಮದನಿ ಜೆಪ್ಪು ದುಆಃ ಆಶೀರ್ವಚನ ನೀಡಿದರು. ವಕೀಲ ಡಿ.ಬಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಅಬ್ದುಲ್ ಹಮೀದ್ ಬಾಖವಿ ವಿಷಯ ಮಂಡಿಸಿದರು.

ಎ.ಎಸ್ ಮಾಣಿಪ್ಪಾಡಿ ಅಬ್ದುಲ್ಲ ಹಾಜಿ  ಇದ್ದರು.  ಹಾಜಿ ಸಲೀಂ ಮದನಿ ಬೈರಿಕಟ್ಟೆ ಸ್ವಾಗತಿಸಿದರು. ಇಸಾಕ್ ಸಅದಿ ಖಿರಾಅತ್ ಪಠಿಸಿದರು. ಅಬ್ದುಲ್ಲ ಕುಂಞಿ ಕೆ. ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !