ಅಕ್ರಮ ಮರಳು ಜಪ್ತಿ

7

ಅಕ್ರಮ ಮರಳು ಜಪ್ತಿ

Published:
Updated:
ಮಾನ್ವಿ ತಾಲ್ಲೂಕಿನ ಜೂಕೂರು ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಸ್ಥಳಕ್ಕೆ ಶುಕ್ರವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

ಮಾನ್ವಿ:  ತಾಲ್ಲೂಕಿನ ಜೂಕೂರು ಗ್ರಾಮದ ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 5,500ಮೆಟ್ರಕ್‌ ಟನ್‌ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ತಹಶೀಲ್ದಾರ್‌ ಅಮರೇಶ ಬಿರಾದಾರ, ಸಿಪಿಐ ಚಂದ್ರಶೇಖರ ಮತ್ತಿತರ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಅಕ್ರಮವಾಗಿ ಸಂಗ್ರಹಿಸಿದ್ದ ಮರಳಿನ ಅಂದಾಜು ಮೌಲ್ಯ ₹ 28ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಎಂ.ವಿಶ್ವನಾಥ ನೀಡಿದ ದೂರಿನ ಅನ್ವಯ ದೊಡ್ಡ ಗೋಕಾರಿ ಮುಕ್ಕಣ್ಣ, ಲಕ್ಷ್ಮಣ, ಉಮಾಶಂಕರ, ಶಿವಶಂಕರ ಸೇರಿದಂತೆ 13 ಮಂದಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !