7

ಸೋಮವಾರ 01-07-18

Published:
Updated:
ಚಿನಕುರುಳಿ

ರಾಜ್ಯದ ನೀರಾವರಿ ಯೋಜನೆಗಳಿಗೆ ತೀವ್ರ ಗಮನ

ಹಾಸನ, ಜೂ. 30– ದೇಶದ ಮುಖ್ಯ ಸಮಸ್ಯೆಯಾದ ಅನ್ನ ಸಮಸ್ಯೆಯನ್ನು ನಿವಾರಿಸಲು, ರಸ್ತೆ ರಿಪೇರಿ, ಶಾಲಾ ನಿರ್ಮಾಣ ಮುಂತಾದ ಕೆಲಸಗಳಿಗೆ ಆದ್ಯತೆಯನ್ನು ಕಡಿಮೆ ಮಾಡಿ ಬೃಹತ್‌ ಹಾಗೂ ಮಧ್ಯಮ ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡುವುದಾಗಿ ಗೊರೂರಿನ ಬಳಿ ಹೇಮಾವತಿ ಅಣೆಕಟ್ಟೆಗೆ ಶಂಕುಸ್ಥಾಪನೆ ಮಾಡುತ್ತಾ ಇಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಹೇಳಿದರು.

‘ನೀರಾವರಿ ಯೋಜನೆಗಳನ್ನು ಪೂರೈಸಿ, ವ್ಯವಸಾಯೋತ್ಪಾದನೆಯನ್ನು ಹೆಚ್ಚಿಸಿ ರಾಜ್ಯದ ಜನತೆ ಮುಂದೆ ಇರುವ ಅನ್ನ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಪ್ರಗತಿಪರ ಸುಭದ್ರ ಸರಕಾರ ರಚನೆಗಾಗಿ ಸೋಷಲಿಸ್ಟ್‌ ಐಕಮತ್ಯಕ್ಕೆ ಪಿಎಸ್‌ಪಿ ಕರೆ

ಮುಂಬೈ, ಜೂ. 30– ಕಾಂಗ್ರೆಸ್‌ ಆಡಳಿತವನ್ನು ಕೊನೆಗಾಣಿಸಿ ಪ್ರಗತಿಪರವಾಗಿರುವಂತಹ ಸುಭದ್ರ ಸರಕಾರ ರಚನೆಗಾಗಿ ರಾಷ್ಟ್ರೀಯ ಮತ್ತು ಸೋಷಲಿಸ್ಟ್‌ ಪಕ್ಷಗಳೆಲ್ಲವೂ ಒಗ್ಗೂಡಬೇಕೆಂದು ಪ್ರಜಾಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಇಂದು ಕರೆಕೊಟ್ಟಿದೆ.

ಜೂನ್‌ 23ರಿಂದ ಇಲ್ಲಿ ಸಮಾವೇಶದಲ್ಲಿರುವ ಸಮಿತಿಯು ಕಾಂಗ್ರೆಸ್ಸಾಗಲಿ, ಈಗ ಪರಸ್ಪರ ಸೈದ್ಧಾಂತಿಕ ವಿರೋಧಗಳಿರುವ ಸಡಿಲ ಸಮ್ಮಿಶ್ರ ಕೂಟಗಳಾಗಲಿ ಜನರ ಆಕಾಂಕ್ಷೆಗಳನ್ನು ಈಡೇರಿಸಲಾರವೆಂದು ಹೇಳಿದೆ.

ಮುಂಬೈನಲ್ಲಿ ಬದಲಿಹೃತ್ಕವಾಟ ಜೋಡಣೆ

ಮುಂಬೈ, ಜೂ. 30– ಕಾರ್ಖಾನೆ ಕಾರ್ಮಿಕನೊಬ್ಬನ ಹೃದಯದ ಅಯೋರ್ಟಾ ರಕ್ತನಾಳ ಕವಾಟವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆ ಮುಂಬೈನ ನಾಯರ್‌ ಆಸ್ಪತ್ರೆಯಲ್ಲಿ ನಿನ್ನೆ ಯಶಸ್ವಿಯಾಗಿ ನಡೆಯಿತು. ರಾತ್ರಿ ಸುಖನಿದ್ರೆ ಪಡೆದ ಅವನ ಆರೋಗ್ಯ ಸ್ಥಿತಿ ಇಂದು ಬೆಳಿಗ್ಗೆ ತೃಪ್ತಿಕರವಾಗಿದೆ ಎಂದು ವೈದ್ಯರು ತಿಳಿಸಿದರು.

ಡಾ. ಕೆ.ಎನ್‌. ದಸ್ತೂರ್‌ ಅವರ ನಾಯಕತ್ವದಲ್ಲಿ 20 ಡಾಕ್ಟರುಗಳ ತಂಡ ಶಸ್ತ್ರಚಿಕಿತ್ಸೆ ನಡೆಸಿತು.

ಎಚ್‌.ಎಂ.ಟಿ. ರಫ್ತು ಈ ವರ್ಷ ದ್ವಿಗುಣ

ಮುಂಬೈ, ಜೂ. 30– ಹಿಂದೂಸ್ತಾನ್‌ ಮೆಷೀನ್‌ಟೂಲ್ಸ್‌ ಕಾರ್ಖಾನೆಯ ರಫ್ತುಗಳನ್ನು ಈ ವರ್ಷ ದ್ವಿಗುಣಗೊಳಿಸಿ ಒಂದು ಕೋಟಿ ರೂ ಗಳಿಗೆ ಏರಿಸಲಾಗುವುದು.

ಆರು ವಾರ ವಿದೇಶ ಪ್ರವಾಸ ಮುಗಿಸಿಕೊಂಡು ಇಂದು ಇಲ್ಲಿಗೆ ಬಂದ ಕಾರ್ಖಾನೆ ಡೈರೆಕ್ಟರ್‌ ಎಸ್‌.ಎಂ. ಪಾಟೀಲ್‌ ಈ ವಿಷಯ ತಿಳಿಸಿದರು.

ಪ್ರಾಚೀನ ಭಾರತದ ಚಿತ್ರಕಲಾಸಂಪತ್ತು

ನವದೆಹಲಿ, ಜೂ. 30– ಪ್ರಾಚೀನ ಭಾರತದಲ್ಲಿ ಸ್ಥಾಯಿ ಚಿತ್ರಕಲೆಗಳ ಜೊತೆಗೆ ಸಂಚಾರಿ ಚಿತ್ರಶಾಲೆಗಳೂ ಅಸ್ತಿತ್ವದಲ್ಲಿದ್ದವು.

ರಾಷ್ಟ್ರೀಯ ಮ್ಯೂಜಿಯಂನ ಡೈರೆಕ್ಟರ್‌ ಶ್ರೀ ಸಿ. ಶಿವರಾಮಮೂರ್ತಿಯವರು ಬರೆದಿರುವ ‘ದಕ್ಷಿಣಭಾರತದ ಕಲಾಕೃತಿಗಳು’ ಎಂಬ ಇದೀಗತಾನೇ ಪ್ರಕಟವಾಗಿರುವ ಗ್ರಂಥದಿಂದ ಈ ಸಂಗತಿ
ಗೊತ್ತಾಗಿದೆ.

ರಾಮಘಡ (ಜೋಗ್‌ಮೀರಾ)ಗುಹೆಯಲ್ಲಿರುವ ಕ್ರಿಸ್ತ ಪೂರ್ವ ಎರಡನೇ ಶತಮಾನದ ಕೆತ್ತನೆಯೊಂದರಲ್ಲಿ ‘ರೂಪಾಧಕ’ (ಕಲಾವಿದ) ಹಾಗೂ ನೃತ್ಯ ಪರಿಣತೆಯಾದ ಆತನ ಪ್ರೇಯಸಿಯನ್ನು ಕುರಿತ ಇರುವ ಪ್ರಸ್ತಾಪ ಅತ್ಯಂತ ಹಿಂದಿನದು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !