ಹವ್ಯಾಸಕ್ಕೊಂದು ಕ್ಲಬ್‌

7

ಹವ್ಯಾಸಕ್ಕೊಂದು ಕ್ಲಬ್‌

Published:
Updated:
ಹವ್ಯಾಸ ಕ್ಲಬ್‌

ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಹವ್ಯಾಸಗಳು ಇದ್ದೇ ಇರುತ್ತವೆ. ಚಿತ್ರಕಲೆ, ಡಿಸೈನಿಂಗ್, ವಾಲ್ ಪೇಯಿಂಟ್, ಫೋಟೋಗ್ರಫಿ, ನೃತ್ಯ, ಕೆತ್ತನೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡರೂ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ಮತ್ತು ವೇದಿಕೆ ಸಿಕ್ಕಿರುವುದಿಲ್ಲ. ತರಬೇತಿ ಶಾಲೆಗಳು ಇದ್ದರೂ ಆರ್ಥಿಕ ಸ್ಥಿತಿಯಿಂದ ಹಿಂದೆ ಉಳಿದುಬಿಡುತ್ತಾರೆ. ಅಂತಹವರಿಗಾಗಿಯೇ ನಗರದಲ್ಲೊಂದು ವಿಶಿಷ್ಟ ಹವ್ಯಾಸ ಗುಂಪಿದೆ. ಕಲಾಸಕ್ತರಿಗೆ ಅವರವರ ಹವ್ಯಾಸಕ್ಕೆ ತಕ್ಕಂತೆ ಕಡಿಮೆ ಹಣದಲ್ಲಿ ತರಬೇತಿ ನೀಡುತ್ತಿದೆ. ಹೆಸರಘಟ್ಟದ ವಚನಾ ಎಂಬುವರು ಹವ್ಯಾಸ ಕ್ಲಬ್‌ವೊಂದನ್ನು 2013ರಲ್ಲಿ ಆರಂಭಿಸಿದ್ದಾರೆ. 

‘ಹವ್ಯಾಸ’ ದಿ ಯೂನಿಕ್ ಹಾಬ್ಬೀ ಕ್ಲಬ್’ ಎಂಬ ಫೇಸ್ ಬುಕ್ ಗುಂಪನ್ನು ಕ್ರಿಯೇಟ್ ಮಾಡಿ, ಅದರ ಮೂಲಕ ಹವ್ಯಾಸಿಗರನ್ನು ಸೆಳೆದು ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಾರೆ. ಆರಂಭದಲ್ಲಿ ಈ ತಂಡವನ್ನು ಆರಂಭಿಸಿದವರು ನಾಲ್ಕು ಜನರು. ಆದರೆ ಸದ್ಯ ವಾಚನಾ ಹಾಗೂ ಮಹೇಂದ್ರ ಪ್ಯಾಟಿ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಈ ತಂಡದ ವಿಶೇಷ ಎಂದರೆ, ಚಿತ್ರಕಲೆ, ಡಿಸೈನಿಂಗ್, ವಾಲ್ ಪೇಯಿಂಟ್, ಫೋಟೋಗ್ರಫಿ, ನೃತ್ಯ, ಸಂಗೀತ, ಉದ್ಯಾನವನ, ಅಡುಗೆ ಕಲೆ, ಕುಂಬಾರಿಕೆ ಬಗ್ಗೆ ಆಸಕ್ತಿ ಇರುವವರಿಗೆ ಇವರು ತಜ್ಞರಿಂದ ತರಬೇತಿ ನೀಡುತ್ತಾರೆ. ವಾರಾಂತ್ಯಗಳಲ್ಲಿ ಈ ತರಗತಿಗಳನ್ನು ನಡೆಸುತ್ತಾರೆ. ಆಸಕ್ತರು ಯಾರೂ ಬೇಕಾದರೂ ಇಲ್ಲಿ ಸೇರಿಕೊಳ್ಳಬಹುದು. ವಾಚನಾ ಅವರು ಚಿತ್ರಕಲೆ ಬಗ್ಗೆ ಹೇಳಿಕೊಡುತ್ತಾರೆ. 

‘ನಾವು ಇಂತಹ ಕಲೆಯನ್ನು ಕಲಿಯಬೇಕು, ನಮಗೆ ಅದಕ್ಕೆ ತಕ್ಕ ತರಬೇತಿ ಬೇಕು’ ಎಂದು ಇವರನ್ನು ಹವ್ಯಾಸಿಗರು ಸಂಪರ್ಕಿಸಿದಾಗ, ವಾರಾಂತ್ಯದಲ್ಲಿ ಕಾರ್ಯಾಗಾರವನ್ನು ಮಾಡಿ, ಮಾರ್ಗದರ್ಶನವನ್ನು ಮಾಡುತ್ತಾರೆ. ಇಲ್ಲಿ ವಯಸ್ಕರಿಗಲ್ಲದೇ ಮಕ್ಕಳಿಗೂ ಏರ್‌ ಮಾಡೆಲಿಂಗ್‌, ಶಿಫ್‌ ಮಾಡೆಲಿಂಗ್‌ ಬಗ್ಗೆ ವಾರಾಂತ್ಯಗಳಲ್ಲಿ ಹೇಳಿಕೊಡಲಾಗುತ್ತದೆ. ಬೇಸಿಗೆ ರಜದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನೂ ನಡೆಸಲಾಗುತ್ತದೆ. 

‘ನನಗೂ ಮೊದಲಿನಿಂದಲೂ ಚಿತ್ರಕಲೆ ಎಂದರೆ ಆಸಕ್ತಿ. ನನಗೆ ಗೊತ್ತಿರುವ ಕಲೆಯನ್ನು ಬೇರೆಯವರಿಗೂ ಕಲಿಸಬೇಕು ಎನ್ನುವ ತುಡಿತ ನನ್ನಲ್ಲಿತ್ತು. ಈಗ ನಾನು ಸಾಧ್ಯವಾದಷ್ಟು ಜನರಿಗೆ ತರಬೇತಿಯನ್ನು ನೀಡುತ್ತಿದ್ದೇನೆ’ ಎಂದು ವಿಶ್ವಾಸದಿಂದ ಹೇಳುತ್ತಾರೆ ವಚನಾ.

ಎಲ್ಲಾ ವಯಸ್ಸಿನವರಿಗೆ ಇಲ್ಲಿ ಪ್ರವೇಶವಿದೆ. ನಗರದ ವಿವಿಧ ಸ್ಥಳಗಳಲ್ಲಿಯೂ ಕಾರ್ಯಾಗಾರಗಳನ್ನು ನಡೆಸುತ್ತಾರೆ. 

ಸಂಪರ್ಕಕ್ಕಾಗಿ: 8904341816

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !