ರಾಜಕಾರಣದ ಸಂದರ್ಭ ವಿವೇಕ ಮುಖ್ಯ: ಕಂಬಾರ

7
ಮಾಸ್ತಿ ಪ್ರಶಸ್ತಿ ಪ್ರದಾನ, ಕಥಾ, ಕಾದಂಬರಿ ಪುರಸ್ಕಾರ

ರಾಜಕಾರಣದ ಸಂದರ್ಭ ವಿವೇಕ ಮುಖ್ಯ: ಕಂಬಾರ

Published:
Updated:
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಕೋಲಾರದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌ ಆಶ್ರಯದಲ್ಲಿ ಪ್ರೊ.ಎಂ.ಆರ್‌.ಕಮಲಾ, ಲೇಖಕರಾದ ಡಾ.ಬಿ.ಎಲ್‌.ವೇಣು, ಡಾ.ಕೆ.ವಿ.ತಿರುಮಲೇಶ್‌, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಮಾಸ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಎಸ್‌.ಆರ್‌.ವಿಜಯಶಂಕರ್‌,ಸಿ.ಎನ್‌.ರಾಮಚಂದ್ರನ್‌, ಎನ್‌.ಆರ್‌.ವಿಶುಕುಮಾರ್‌, ಡಾ.ಎಂ.ಎಸ್‌.ಅಶಾದೇವಿ. ಮಾವಿನಕೆರೆ ರಂಗನಾಥ್‌ ಇದ್ದರು–ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜಕಾರಣವೇ ಮುಂದೆ ಮನುಷ್ಯನ ದೈವವನ್ನು ನಿರ್ಧರಿಸುತ್ತದೆ. ಆ ಸಂದರ್ಭ ನಮಗೆ ವಿವೇಕ ಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ 127ನೇ ಜನ್ಮವರ್ಷದ ಪ್ರಯುಕ್ತ ಡಾ.ಮಾಸ್ತಿ ಟ್ರಸ್ಟ್‌ ಕೋಲಾರದ ಆಶ್ರಯದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಮಾಸ್ತಿ ಪ್ರಶಸ್ತಿ, ಮಾಸ್ತಿ ಕಥಾ ಕಾದಂಬರಿ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. 

ಮಾಸ್ತಿ ಅವರನ್ನು ಸ್ಮರಿಸಿದ ಕಂಬಾರ, ‘ಪ್ರತಿಯೊಬ್ಬರನ್ನೂ ಮಾಸ್ತಿ ಅವರು ಸಹಾನುಭೂತಿಯಿಂದ ನೋಡುತ್ತಿದ್ದರು. ಅವರಿಂದ ಕಲಿತದ್ದು, ಕಲಿಯುವುದು ತುಂಬಾ ಇದೆ. ಇಂದು ಪ್ರಶಸ್ತಿ ಪಡೆದವರಲ್ಲಿ ಇಬ್ಬರು ನನ್ನ ವಿದ್ಯಾರ್ಥಿಗಳಾಗಿರುವುದು ಹೆಚ್ಚು ಖುಷಿ ತಂದಿದೆ’ ಎಂದು ಹೇಳಿದರು. 

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಮಾಸ್ತಿ ಅವರ ಆಶೀರ್ವಾದ ಫಲ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಎಲ್ಲ ಹಿರಿಯರ ಸಾಲಿನಲ್ಲಿ ಎಡೆಕೊಟ್ಟಿದ್ದು ಖುಷಿ ತಂದಿದೆ. ಪ್ರೀತಿಸುವ ಮನಸ್ಸುಗಳ ಮಧ್ಯೆ ಪ್ರಶಸ್ತಿ ಪಡೆಯುವುದು ನನ್ನ ಭಾಗ್ಯ’ ಎಂದರು. 

ಡಾ.ಬಿ.ಎಲ್‌.ವೇಣು ಮಾತನಾಡಿ, ‘ಅಪರೂಪದ ವ್ಯಕ್ತಿಯ ಹೆಸರಿನ ಪ್ರಶಸ್ತಿಯಿಂದ ನನಗೆ ಆಸ್ತಿ ಸಿಕ್ಕಿದಷ್ಟೇ ಸಂತಸವಾಗಿದೆ. ಬರವಣಿಗೆಯೇ ನನ್ನ ಆರೋಗ್ಯದ ಗುಟ್ಟು. ಇಂಥ ಪ್ರಶಸ್ತಿಗಳು ಟಾನಿಕ್‌ ಇದ್ದ ಹಾಗೆ. ಇವು ಸಿಕ್ಕಿದರೆ ಒಂದೆರಡು ವರ್ಷ ಜಾಸ್ತಿ ಬದುಕುತ್ತೇವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಚಿಂತಕ ಡಾ.ಸಿ.ಎನ್‌.ರಾಮಚಂದ್ರನ್‌ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕರಾದ ಡಾ.ಎಂ.ಎಸ್‌.ಆಶಾದೇವಿ, ಎಸ್‌.ಆರ್‌.ವಿಜಯಶಂಕರ್‌, ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಂ.ಆರ್‌.ಕಮಲಾ ಮಾತನಾಡಿದರು. ಮಾಸ್ತಿ ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ಪ್ರಾಸ್ತಾವಿಕ ಮಾತನಾಡಿದರು. ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !