ಅನುಮಾನದಿಂದ ಥಳಿತ: ವ್ಯಕ್ತಿ ಸಾವು

7

ಅನುಮಾನದಿಂದ ಥಳಿತ: ವ್ಯಕ್ತಿ ಸಾವು

Published:
Updated:

ವಿಜಯಪುರ:  ನೆರೆಯ ಮಹಾರಾಷ್ಟ್ರದ ಧುಲೆ ಜಿಲ್ಲೆಗೆ ಭಿಕ್ಷಾಟನೆಗಾಗಿ ತೆರಳಿದ್ದ ಚಡಚಣ ತಾಲ್ಲೂಕಿನ ಗುಂದವಾನ ಗ್ರಾಮದ ಗೋಸಾಯಿ ಸಮಾಜದ ರಾಜು ಭೋಸಲೆ (45) ಎಂಬಾತ; ಅಲ್ಲಿನ ಗ್ರಾಮಸ್ಥರಲ್ಲಿ ಮಕ್ಕಳ ಕಳ್ಳ ಎಂಬ ಅನುಮಾನಕ್ಕೀಡಾಗಿ, ಥಳಿತಕ್ಕೊಳಗಾಗಿ ಭಾನುವಾರ ಮೃತಪಟ್ಟಿದ್ದಾರೆ.

ರಾಜು ಭೋಸಲೆಯ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಹಲವರು ತೆರಳಿದ್ದು, ಮಂಗಳವಾರ ನಸುಕಿನ ವೇಳೆಗೆ ವಾಪಾಸಾಗಲಿದ್ದಾರೆ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು. ರಾಜು ಭೋಸಲೆಗೆ ಐವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಒಬ್ಬಾಕೆಯ ವಿವಾಹವಾಗಿದ್ದು, ಉಳಿದವರು ಗುಂದವಾನದಲ್ಲೇ ನೆಲೆಸಿದ್ದಾರೆ ಎಂಬುದು ತಿಳಿದು ಬಂದಿದೆ.

‘ಗುಂದವಾನದಲ್ಲಿ ಗೋಸಾಯಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕುಟುಂಬಗಳ ಸದಸ್ಯರು ಪ್ರತಿ ವರ್ಷ ದೀಪಾವಳಿ ಆಚರಣೆ ಬಳಿಕ ವಿವಿಧೆಡೆ ಭಿಕ್ಷಾಟನೆಗೆ ತೆರಳುತ್ತಾರೆ. ಹೆಚ್ಚಿನ ಸಂಖ್ಯೆಯ ಕುಟುಂಬಗಳಿಗೆ ಜಮೀನಿಲ್ಲ. ಕುಲ ಕಸುಬು ಭಿಕ್ಷಾಟನೆಯೇ ಆಗಿದೆ’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !