'ಉದ್ಯೋಗ ಮತ್ತು ವಿಕಾಸ' ಕಾರ್ಯಕ್ರಮ ಜುಲೈ 8 ರಂದು

7

'ಉದ್ಯೋಗ ಮತ್ತು ವಿಕಾಸ' ಕಾರ್ಯಕ್ರಮ ಜುಲೈ 8 ರಂದು

Published:
Updated:

ಮಂಗಳೂರು: ಸ್ವಉದ್ಯೋಗ ಮತ್ತು ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸುವ ಉದ್ದೇಶದಿಂದ 'ಉದ್ಯೋಗ ಮತ್ತು ವಿಕಾಸ' ಕಾರ್ಯಕ್ರಮ ಇದೇ 8ರಂದು ಭಾನುವಾರ ಬೆಳಿಗ್ಗೆ ಕದ್ರಿ ರಸ್ತೆಯ ಸಿ.ವಿ. ನಾಯಕ್ ಸಭಾಗೃಹದಲ್ಲಿ ನಡೆಯಲಿದೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ ಪೈ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಂಗಳೂರು ಸುತ್ತಲಿನ 25 ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು, ಪದವೀಧರರು ಹಾಗೂ ಲಘು ಉದ್ಯಮ ಪ್ರಾರಂಭಿಸುವ ಹಂಬಲ ಇರುವವರಿಗೆ ಮುಕ್ತ ಅವಕಾಶವಿದ್ದು, ಮಾರ್ಗದರ್ಶನ ನೀಡಲಾಗುವುದು ಎಂದರು.

ಬೆಂಗಳೂರಿನ ಬ್ರಿಕ್ಸ್ ಇಂಡಿಯಾ ಕಂಪನಿ ಮುಖ್ಯ ಆಡಳಿತಗಾರರಾದ ಸಂಗೀತಾ ಕುಲಕರ್ಣಿ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಲಘು ಉದ್ಯಮ ಹಾಗೂ ಆರ್ಥಿಕತೆ ವಿಭಾಗದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಅವರು ಅತಿಥಿಯಾಗಿ ಭಾಗವಹಿಸುವರು. ಹಲವು ವಿಷಯಗಳ ಕುರಿತು 10 ಮಂದಿ ತಜ್ಞರು ಮಾಹಿತಿ ನೀಡಲಿರುವರು.

ಕಾರ್ಪೊರೇಟ್ ಮುಖಂಡರು ಮತ್ತು ಕಂಪೆನಿಗಳ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, 400 ಯುವ ಭಾಗೀದಾರರಿಗೆ ಶುಲ್ಕವಿರುವುದಿಲ್ಲ. ಪ್ರಾಂಶುಪಾಲರ ಮೂಲಕ ಅಥವಾ, ವಾಟ್ಸ್ ಆ್ಯಪ್, ಇ-ಮೇಲ್ ಮೂಲಕ ನೋಂದಾಯಿಸಬಹುದು.
gsbsevasangh@gmail.com,ಹೆಚ್ಚಿನ ಮಾಹಿತಿಗಾಗಿ 9480135829 ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಕ್ರಮ ನಿರ್ದೇಶಕ ಕುಂಬ್ಳೆ ನರಸಿಂಹ ಪ್ರಭು, ಖಜಾಂಚಿ ಜಿ. ವಿಶ್ವನಾಥ್ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್ ಶಣೈ , ನಿಖಿಲ್ ಕಾಮತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !