ತೆಂಗಿನ ನಾರಿನ ಪೀಠೋಪಕರಣ: ಹೆಗ್ಗಡೆ

7
ಹೈ–ಕದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿತರಣೆ

ತೆಂಗಿನ ನಾರಿನ ಪೀಠೋಪಕರಣ: ಹೆಗ್ಗಡೆ

Published:
Updated:
ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಂಗಳವಾರ ಕಲಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಜಯಪುರ, ಯಾದಗಿರಿ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ 453 ಶಾಲೆಗಳಿಗೆ ವಿತರರಿಸಲು ಸಿದ್ಧವಾದ ಡೆಸ್ಕ್-ಬೆಂಚುಗಳನ್ನು ಒಯ್ಯುವ ವಾಹನಕ್ಕೆ ಈಚೆಗೆ ಹಸಿರು ನಿಶಾನೆ ತೋರಿದರು. (ಉಜಿರೆ ಚಿತ್ರ)

 ಉಜಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನು ನೀಡಲಾಗುವುದು ಎಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ  ತಿಳಿಸಿದರು.

 ಧರ್ಮಸ್ಥಳದಲ್ಲಿ  ಮಂಗಳವಾರಕ ಕಲಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಜಯಪುರ, ಯಾದಗಿರಿ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳ 453 ಶಾಲೆಗಳಿಗೆ ಡೆಸ್ಕ್-ಬೆಂಚುಗಳನ್ನು ಸಾಂಕೇತಿಕವಾಗಿ ವಿತರಿಸಿ , ಒಯ್ಯುವ ವಾಹನಗಳಿಗೆ ಹಸಿರುನಿಶಾನೆ ತೋರಿ ಅವರು ಮಾತನಾಡಿದರು.

ಪರಿಸರ ಸ್ನೇಹಿ ಪೀಠೋಪಕರಣ: ಡೆಸ್ಕ್, ಬೆಂಚುಗಳ ತಯಾರಿಕೆಯಲ್ಲಿ ಮರದ ಬಳಕೆ ಮಾಡದೆ ಸಿಮೆಂಟಿನಿಂದ ರಚಿಸಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಪರಿಸರ ಸ್ನೇಹಿ ಆಸನ : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನು ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು. ವಿಜಯಪುರ ಜಿಲ್ಲೆಗೆ ₹ 66 ಲಕ್ಷ ಮೌಲ್ಯದ 1,200 ಜೊತೆ ಡೆಸ್ಕ್, ಬೆಂಚುಗಳನ್ನು ನೀಡಲಾಗುತ್ತದೆ. ಪರಿಸರ ಸ್ನೇಹಿ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನುಒದಗಿಸಲು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟನೂರು ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರಿ ಸಂಸ್ಥೆ ಒಪ್ಪಿಕೊಂಡಿದೆ.

ತೆಂಗಿನ ಕಾಯಿಯ ಸಿಪ್ಪೆಯಿಂದ ತೆಗೆದ ನಾರಿನಿಂದ ಪರಿಸರ ಸ್ನೇಹಿ ಡೆಸ್ಕ್ ಬೆಂಚುಗಳನ್ನು ತಯಾರಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಸಿ ನಾಟಿ, ಸಾಲು ಮರ ನಾಟಿ ಬೀಜದುಂಡೆಗಳ ಬಳಕೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ, ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಾ ಬಂದಿದ್ದು ಇದೀಗ ತೆಂಗಿನ ನಾರಿನ ಪೀಠೋಪಕರಣಗಳ ಬಳಕೆ ಮತ್ತೊಂದು ವಿನೂತನ ಕಾರ್ಯಕ್ರಮವಾಗಿದೆ. ತೆಂಗು ಬೆಳೆಯುವ ರೈತರಿಗೂ ಹೊಸ ಮನ್ನಣೆ ದೊರಕಿದೆ ಎಂದರು.

ಒಂದು ಜತೆ ಡೆಸ್ಕ್ ಮತ್ತು ಬೆಂಚು ತಯಾರಿಸಲು 3 ಘನ ಅಡಿ ಮರದ ಅಗತ್ಯವಿದ್ದು ಸಿಮೆಂಟ್ ಬಳಸಿ ತಯಾರಿಸುವುದರಿಂದ ಈ ವರೆಗೆ 1,58,716 ಜೊತೆ ಡೆಸ್ಕ್, ಬೆಂಚು ತಯಾರಿಸಿ 1,58,148 ಘನ ಅಡಿ ಮರ ಉಳಿತಾಯ ಮಾಡಲಾಗಿದೆ. ಶೇಕಡ 20 ಶಾಲಾಭಿವೃದ್ಧಿ ಸಮಿತಿಯವರು ಭರಿಸಿದರೆ, ಶೇಕಡ 80 ರಷ್ಟು ಹಣ ಧರ್ಮಸ್ಥಳದ ವತಿಯಿಂದ ನೀಡಲಾಗುತ್ತದೆ. ನೇರವಾಗಿ ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುತ್ತದೆ.

 ಹೇಮಾವತಿ ವಿ. ಹೆಗ್ಗಡೆ, ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಉಜಿರೆಯ ಲಕ್ಷ್ಮಿ ಗ್ರೂಪ್‌ನ ಮಾಲೀಕ ಮೋಹನ ಉಜಿರೆ ಮತ್ತು ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !