ಮಳವಳ್ಳಿ ತಾಲ್ಲೂಕಿನ 30 ಮಂದಿ ಸುರಕ್ಷಿತ

4

ಮಳವಳ್ಳಿ ತಾಲ್ಲೂಕಿನ 30 ಮಂದಿ ಸುರಕ್ಷಿತ

Published:
Updated:
ಮಾನಸ ಸರೋವರ ಯಾತ್ರೆಯಲ್ಲಿರುವ ಮಳವಳ್ಳಿಯ ಕೆ.ಎಂ.ಮಂಜುನಾಥಸ್ವಾಮಿ ಹಾಗೂ ಪೂರ್ಣಿಮಾ ದಂಪತಿ

ಮಂಡ್ಯ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮಳವಳ್ಳಿ ತಾಲ್ಲೂಕಿನ 30 ಮಂದಿ ಪ್ರವಾಸಿಗರು ಸುರಕ್ಷಿತವಾಗಿ ಇರುವುದಾಗಿ ಮಂಗಳವಾರ ಮಧ್ಯಾಹ್ನ ಅವರ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಮಳವಳ್ಳಿ, ಹಲಗೂರು ಭಾಗದ 30 ಜನರು ಜೂನ್‌ 27ರಂದು ರೈಲಿನ ಮೂಲಕ ದೆಹಲಿಗೆ ತೆರಳಿ ಅಲ್ಲಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಅವರಲ್ಲಿ ಐವರು ಮಳವಳ್ಳಿ ಪಟ್ಟಣದ ಎರಡುಗಳ ಕುಟುಂಬ ಸದಸ್ಯರಿದ್ದಾರೆ. ಅವರು ಸ್ನೇಹಿತರಾದ ಅನಿಲ್‌ ಅವರಿಗೆ ಕರೆ ಮಾಡಿ, 30 ಜನರೂ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.

‘ಮಳವಳ್ಳಿ ತಾಲ್ಲೂಕಿನಿಂದ ಯಾತ್ರೆಗೆ ತೆರಳಿರುವ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿಲ್ಲ. 30 ಮಂದಿ ಪ್ರವಾಸಿಗರಲ್ಲಿ ಕೆಂ.ಎಂ.ಮಂಜುನಾಥಸ್ವಾಮಿ, ಶಿವಸ್ವಾಮಿ ನನ್ನ ಸ್ನೇಹಿತರು. ಅವರು ಸುರಕ್ಷಿತವಾಗಿ ಇರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ. ಎಲ್ಲರೂ 15 ದಿನಗಳ ಪ್ರವಾಸಕ್ಕೆ ತೆರಳಿದ್ದರು’ ಎಂದು ಮಳವಳ್ಳಿಯ ಅನಿಲ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !