ಸಿರಿಬಾಗಿಲು: ಹಳಿಯ ಮೇಲೆ ಕುಸಿದು ಬಿದ್ದ ಬೃಹತ್ ಬಂಡೆ: ರೈಲು ಸಂಚಾರ ವ್ಯತ್ಯಯ

7

ಸಿರಿಬಾಗಿಲು: ಹಳಿಯ ಮೇಲೆ ಕುಸಿದು ಬಿದ್ದ ಬೃಹತ್ ಬಂಡೆ: ರೈಲು ಸಂಚಾರ ವ್ಯತ್ಯಯ

Published:
Updated:
ಎಡಕುಮೇರಿ ಸಮೀಪದ ಸಿರಿಬಾಗಿಲಿನ ಕೊಡಗರವಳ್ಳಿ ಎಂಬಲ್ಲಿ ರೈಲು ಹಳಿಯ ಮೇಲೆ ಗುಡ್ಡ ಮತ್ತು ಬೃಹತ್ ಬಂಡೆಯು ಮದ್ಯಾಹ್ನ ಕುಸಿದು ಬಿದ್ದಿದೆ.

ಸುಬ್ರಹ್ಮಣ್ಯ: ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಭಾಗ ಮತ್ತು ಬೃಹತ್ ಬಂಡೆ ಮಧ್ಯಾಹ್ನ ವೇಳೆ ಕುಸಿದು ಬಿದ್ದಿದೆ.

ಸುಬ್ರಹ್ಮಣ್ಯ ರೋಡ್-ನೆಟ್ಟಣ ರೈಲು ನಿಲ್ದಾಣ -ಸಕಲೇಶಪುರ ನಡುವಿನ ಎಡಕುಮೇರಿ ಸಮೀಪದ ಸಿರಿಬಾಗಿಲಿನ ಕೊಡಗರವಳ್ಳಿ ಎಂಬಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ  ಗುಡ್ಡ ದ ಭಾಗ, ಮಣ್ಣಿನೊಂದಿಗೆ ಭಾರಿ ಗಾತ್ರದ ಬಂಡೆ ಹಳಿ ಮೇಲೆ ಕುಸಿದು ಬಿದ್ದಿದೆ.ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೆಟ್ಟಣ ರೈಲು ನಿಲ್ದಾಣದಿಂದ ರೈಲು ದೂರ ಸುಮಾರು 65 ಕಿ.ಮೀ ವ್ಯಾಪ್ತಿಯಲ್ಲಿ ಕುಸಿತ ಸಂಭವಿಸಿದೆ. ರೈಲು ಪ್ರಯಾಣಿಕರು ಸಂಕಷ್ಠ ಎದುರಿಸುವಂತಾಯಿತು.

ರೈಲು ಹಳಿಯು ಅಸ್ತವ್ಯಸ್ಥಗೊಂಡಿತು. ಬೃಹತ್‌ ಪ್ರಮಾಣದ ಮಣ್ಣು ಮತ್ತು ಮರ ಗಿಡಗಳು ಕೂಡಾ ಹಳಿಯ  ಬಿದ್ದಿದ್ದುವು. ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ  ಸಿಬ್ಬಂದಿ ತೆರವು ಕಾರ್ಯ ನಡೆಸಿದರು. 40ಕ್ಕೂ ಅಧಿಕ ಕಾರ್ಮಿಕರು ಮಣ್ಣು ತೆರವು ಹಳಿಯನ್ನು ಶೀಘ್ರವೇ ಸಂಚಾರ ಮುಕ್ತಗೊಳಿಸಬಹುದು  ಎಂದು ರೈಲ್ವೆ ಇಲಾಖೆ  ಸಿಬ್ಬಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್‍ನಿಂದ ಈವರೆಗೆ ಈ ಪ್ರದೇಶದಲ್ಲಿ ಮೂರಕ್ಕೂ ಅಧಿಕ ಬಾರಿ ಗುಡ್ಡವು ಹಳಿಯ ಮೇಲೆ ಕುಸಿದು ಬಿದ್ದಿತ್ತು.

ಪ್ರಯಾಣ ಮೊಟಕು: ಮಧ್ಯಾಹ್ನ ಸಂಚರಿಸುವ ಬೆಂಗಳೂರಿನಿಂದ ಮಂಗಳೂರು ತೆರಳುವ ಪ್ಯಾಸೆಂಜರ್ ರೈಲು ತೆರಳಿದ ಬಳಿಕ ಗುಡ್ಡ ಕುಸಿತ ಉಂಟಾಗಿದೆ.ಆದರೆ ನಂತರ 2.10ಕ್ಕೆ ಮಂಗಳೂರಿನಿಂದ ಬೆಂಗಳೂರು ಕಡೆ ತೆರಳುವ ಪ್ಯಾಸೆಂಜರ್ ರೈಲು ತೆರಳುವ ಮೊದಲು  ಗುಡ್ಡ ಕುಸಿದಿದೆ.ಬಳಿಕ  ಹೀಗಾಗಿ ಎಡಕುಮೇರಿ ರೈಲು ನಿಲ್ದಾಣದಲ್ಲಿ ಈ ರೈಲನ್ನು ತಡೆಹಿಡಿಯಲಾಯಿತು.  ಅಲ್ಲಿಂದ ಮತ್ತೆ ಈ ರೈಲು ಹಿಂತುರುಗಿ ನೆಟ್ಟಣಕ್ಕೆ ಬಂತು.ಅಲ್ಲಿ ಕೆಲವು ಪ್ರಯಾಣಿಕರು ಇಳಿದರು.ಅವರಿಗೆ ಇಲಾಖೆಯು ಟಿಕೆಟಿನ ಅರ್ಧದಷ್ಟು ಮೊತ್ತವನ್ನು ಮರಳಿಸಿತು. ಬಳಿಕ ಅವರು ರಸ್ತೆ ಮಾರ್ಗದ ಮೂಲಕ ಪ್ರಯಾಣ ಬೆಳೆಸಿದರು. ರೈಲು ಪುತ್ತೂರು ನಿಲ್ದಾಣಕ್ಕೆ ಆಗಮಿಸಿತು.ಅಲ್ಲಿ ಇಳಿದ ಕೆಲವು ಪ್ರಯಾಣಿಕರು ರಸ್ತೆ ಮಾರ್ಗದ ಮೂಲಕ ಪ್ರಯಾಣ ಮುಂದುವರೆಸಿದರು.

ವಿಳಂಬ: ಮಂಗಳೂರು-ಬೆಂಗಳೂರು ರಾತ್ರಿ ರೈಲು ತಡವಾಗಿ ತೆರಳಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ರೈಲು ಸಂಚಾರದ ವ್ಯತ್ಯಯದಿಂದಾಗಿ ಪ್ರತಿನಿತ್ಯ ರಾತ್ರಿ ವೇಳೆ ಜನರಿಂದ ತುಂಬಿರುತ್ತಿದ್ದ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣವು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !