ರಾಹುಲ್ ಶತಕ: ಕುಕ್ಕೆ ಭಕ್ತಿ

7

ರಾಹುಲ್ ಶತಕ: ಕುಕ್ಕೆ ಭಕ್ತಿ

Published:
Updated:
ಕುಕ್ಕೆಸುಬ್ರಹ್ಮಣ್ಯ ದೇವಳಕ್ಕೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಭೇಟಿ ನೀಡಿದ್ದರು. (ಸಂಗ್ರಹ ಚಿತ್ರ)

ಸುಬ್ರಹ್ಮಣ್ಯ: ಇಂಗ್ಲೆಡ್ ಪ್ರವಾಸ ಹೊರಡುವ ಮೊದಲು ನಾಗಾರಾಧನೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆ.ಎಲ್.ರಾಹುಲ್ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರಿಗೆ ಮಹಾಪೂಜೆ ಸೇವೆ ಸಮರ್ಪಿಸಿದ್ದರು.ಇದೀಗ ಶತಕ ಸಾಧನೆ ಮಾಡಿದ್ದಾರೆ.

ಮಂಗಳವಾರ ರಾತ್ರಿ ನಡೆದ ಭಾರತ-ಇಂಗ್ಲೇಡ್ ಟಿ20 ಸರಣಿಯ ಪ್ರಥಮದಲ್ಲಿ ಟೀಂ ಇಂಡಿಯಾದ ಆಟಗಾರ ಮತ್ತು ಕೆ.ಎಲ್ ರಾಹುಲ್ ಶತಕ ಭಾರಿಸಿದ್ದಾರೆ. ಅಲ್ಲದೆ ಉತ್ತಮ ಸಾಧನೆ ಮೆರೆಯಲು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ರಾಹುಲ್ 54 ಎಸೆತದಲ್ಲಿ 101 ರನ್‍ಗಳನ್ನು ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.

ಇದಲ್ಲದೆ ಈ ಹಿಂದೆ ನಡೆದ ಐರ್ಲೆಂಡ್‌ ವಿರುದ್ದದ ಟೂರ್ನಿಯಲ್ಲಿ ಕೂಡಾ 36 ಎಸೆತದಲ್ಲಿ 70 ರನ್ ಗಳಿಸಿ ತಂಡದ ವಿಜಯದಲ್ಲಿ ಕೊಡುಗೆ ನೀಡಿ ಮಿಂಚಿದ್ದರು.ಈ ಹಿಂದೆ ಐಪಿಎಲ್ ಪಂದ್ಯಾಟಕ್ಕೆ ಮುನ್ನವು ಕೂಡಾ ಶ್ರೀ ದೇವಳಕ್ಕೆ ಆಗಮಿಸಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !