7

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ದೃಷ್ಟಿರಹಿತರಿಗೆ ನೆರವಾಗಬಲ್ಲ ಸಾಧನದ ಆವಿಷ್ಕಾರ

Published:
Updated:
ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ದೃಷ್ಟಿರಹಿತರಿಗೆ ನೆರವಾಗಬಲ್ಲ ಕಡಿಮೆ ವೆಚ್ಚದ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ. (ಪುತ್ತೂರು ಚಿತ್ರ)

 ಪುತ್ತೂರು: ಇಲ್ಲಿಯ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ದೃಷ್ಟಿಹೀನರಿಗೆ ನೆರವಾಗಬಲ್ಲ ಕಡಿಮೆ ವೆಚ್ಚದ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ.

ಅಲ್ಟ್ರಾಸಾನಿಕ್ ಸಂವೇದನೆಗಳನ್ನು ಒಳಗೊಂಡಿರುವ ಸರಳ ವಾಕಿಂಗ್ ಸ್ಟಿಕ್ ಮಾದರಿಯಂತೆ ಇರುವ ಈ ಸಾಧನವನ್ನು ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಅವರ ಸಲಹೆಯಂತೆ ವಿದ್ಯಾರ್ಥಿಗಳಾದ ಅಹನ ರೈ, ಅಭಿಷೇಕ್.ಕೆ, ಅನಂತೇಶ್.ವಿ ಮತ್ತು ಮಧುಸೂದನ.ಎನ್  ಈ ಸಾಧನೆ ಮಾಡಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಪ್ರೊ.ರಾಮಚಂದ್ರ ಬಳ್ಳಾರಿ ಅವರು ಮಾರ್ಗದರ್ಶನ ನೀಡಿದ್ದಾರೆ. ಸಾಧನದ ಅಭಿವೃದ್ಧಿಗೆ  ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅನುದಾನ ದೊರಕಿದೆ ಮತ್ತು ರಾಜ್ಯ ಮಟ್ಟದ ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !