ವಿಟ್ಲ: ಮನೆ ಮೇಲೆ 100 ಅಡಿ ಎತ್ತರದ ಗುಡ್ಡ ಕುಸಿತ 

7

ವಿಟ್ಲ: ಮನೆ ಮೇಲೆ 100 ಅಡಿ ಎತ್ತರದ ಗುಡ್ಡ ಕುಸಿತ 

Published:
Updated:
ಮನೆಯ ಹಿಂಭಾಗದ ಸುಮಾರು 100 ಅಡಿ ಎತ್ತರದ ಗುಡ್ಡ ಕುಸಿದು ಬಿದ್ದಿರುವುದು.

 ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆ ಪರಿಣಾಮ ವೀರಕಂಭ ಗ್ರಾಮದಲ್ಲಿ 100 ಅಡಿ ಎತ್ತರದ ಗುಡ್ಡವು ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ.

ವೀರಕಂಭ ಗ್ರಾಮದ ಸಿಂಗೇರಿತೋಟ ದಿನೇಶ್ ಎಸ್. ಅವರ ಮನೆಯ ಹಿಂಭಾಗದ ಸುಮಾರು 100 ಅಡಿ ಎತ್ತರದ ಗುಡ್ಡವು ಶುಕ್ರವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕುಸಿದು ಭಾರಿ ಹಾನಿ ಸಂಭವಿಸಿದೆ. ಕುಸಿಯುವ ಸದ್ದು ಆಕಸ್ಮಿಕವಾಗಿ ಮನೆಯವರಿಗೆ ತಿಳಿದ ಕಾರಣ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಮನೆಗೆ ಭಾಗಶಃ ಹಾನಿಯಾಗಿದೆ. ಅಡುಗೆ ಕೋಣೆ, ಬಚ್ಚಲು ಮನೆ, ಶೌಚಾಲಯ ಮಣ್ಣಿನೊಳಗೆ ಸೇರಿದೆ. ₹4 ಲಕ್ಷ ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ. ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !