ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುವ ಆಸನಪೂರ್ಣ ಧನುರಾಸನ

7

ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುವ ಆಸನಪೂರ್ಣ ಧನುರಾಸನ

Published:
Updated:
ಪೂರ್ಣ ಧನುರಾಸನ

ಆರೋಗ್ಯ ರಕ್ಷಣೆಗೆ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆರೋಗ್ಯಪಾಲನೆಗೆ ಯೋಗವನ್ನು ನಿತ್ಯ ನಿರಂತರ ಅಭ್ಯಾಸ ನಡೆಸಬೇಕು. ಹಾಗೆಯೇ ಹಲವು ಪ್ರಕಾರದ ಯೋಗಾಸನಗಳನ್ನು ಅಭ್ಯಾಸ ಮಾಡಬೇಕು.

ಪೂರ್ಣ ಧನುರಾಸನ: ಧನುಸ್ ಎಂದರೆ ಬಿಲ್ಲು. ಈ ಆಸನದಲ್ಲಿ ಬೆನ್ನು ಬಿಲ್ಲಿನಂತೆ ಬಾಗಿರುತ್ತದೆ. ಹೊಟ್ಟೆಯ ಆಧಾರದಲ್ಲಿ ಅಭ್ಯಾಸ ಮಾಡುವ ಆಸನವಾಗಿದೆ.

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಮೊದಲು ಕೆಳಮುಖ ಮಾಡಿ, ಹೊಟ್ಟೆಯನ್ನು ನೆಲಕ್ಕೆ ತಾಗಿಸಿ ಉದ್ದಕ್ಕೂ ಮಲಗಬೇಕು. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಮೊಣಕಾಲುಗಳನ್ನು ಬಗ್ಗಿಸಿ ಕೈಗಳಿಂದ ಆಯಾ ಕಾಲಿನ ಹೆಬ್ಬೆರಳುಗ¼ನ್ನು ಹಿಡಿದು ಉಸಿರನ್ನು ತೆಗೆದುಕೊಳ್ಳುತ್ತಾ ಕಾಲುಗಳನ್ನು ಎಳೆದುಕೊಂಡು ಬೆನ್ನನ್ನು ಬಿಲ್ಲಿನಂತೆ ಬಾಗಿಸಬೇಕು. ಈ ಆಸನದಲ್ಲಿ ತೋಳುಗಳು ನೇರವಾಗಿರಬೇಕು ಹಾಗೂ ತೋಳುಗಳು ಕಿವಿಗೆ ಒತ್ತಿರಬೇಕು. ಇದು ಸ್ವಲ್ಪ ವೃತ್ತಾಕಾರದ ಭಂಗಿಯಂತೆ ಕಾಣುತ್ತದೆ. ಪೂರ್ಣಾಧನುರಾಸನ ಭಂಗಿ ಸಮಪರ್ಕಕವಾಗಿ ಬರಬೇಕಾದರೆ ಆರಂಭದಲ್ಲಿ ಧನುರಾಸನವನ್ನು ಚೆನ್ನಾಗಿ ಕಲಿತಿರಬೇಕು.  ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಕಾಲು ನಿಮಿಷದಿಂದ ಒಂದು ನಿಮಿಷ ಇರಬೇಕು. ಅನಂತ ವಿಶ್ರಾಂತಿ ಪಡೆಯಬೇಕು.

ಉಪಯೋಗಗಳು :ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ. ಹೊಟ್ಟೆಯ ಕೊಬ್ಬು ಬೇಗ ಕರಗುತ್ತದೆ. ಬೆನ್ನು ನೋವು ಪರಿಹಾರಕ್ಕೆ ಈ ಆಸನವು ಉಪಕಾರಿಯಾಗಿದೆ. ಈ ಆಸನದಲ್ಲಿ ದೇಹದ ಹೊಕ್ಕುಳಿನ ಭಾಗಕ್ಕೆ ಚೆನ್ನಾಗಿ ರಕ್ತ ಪರಿಚಲನೆಯಾಗುತ್ತದೆ. ಈ ಆಸನದಿಂದ ಆಲಸ್ಯ ನಿವಾರಣೆ, ಲಿವರ್ ಭಾಗಕ್ಕೆ ಮೃದುವಾದ ಮಸಾಜ್, ಮಧುಮೇಹ ನಿಯಂತ್ರಣ, ಬೆನ್ನೆಲುಬುಗಳು ಬಲಗೊಳ್ಳುತ್ತದೆ. ಥೈರಾಯ್ಡ್ ಮತ್ತು ಅಡ್ರಿನಲ್ ಗ್ರಂಥಿಗಳು ಪುನಶ್ಚೇತನಗೊಳ್ಳುತ್ತದೆ.

ವಿ.ಸೂ : ಆದರೆ ತೀವ್ರ ಸೊಂಟ ನೋವು, ಕುತ್ತಿಗೆ ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ. ಯೋಗ ಶಿಕ್ಷಕರ ನೆರವಿನ ಮೂಲಕ ಈ ಆಸನವನ್ನು ಕಲಿಯಬೇಕು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !