ಕ್ರೀಡೆಯಿಂದ ದೈಹಿಕ ಬೆಳವಣಿಗೆ : ಒಡಿಯೂರು ಶ್ರೀ 

7
ಒಡಿಯೂರು ಗ್ರಾಮೋತ್ಸವ : ಹೊರಾಂಗಣ ಸ್ಪರ್ಧೆ

ಕ್ರೀಡೆಯಿಂದ ದೈಹಿಕ ಬೆಳವಣಿಗೆ : ಒಡಿಯೂರು ಶ್ರೀ 

Published:
Updated:
 ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಏರ್ಪಡಿಸಿದ ಹೊರಾಂಗಣ ಸ್ಪರಧೆಗಳ ಉದ್ಘಾಟನಾ ಸಮಾರಂಭದಲ್ಲಿ ಗ್ರಾಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸಾಧ್ವೀ ಮಾತಾನಂದಮಯಿ ಉಪಸ್ಥಿತರಿದ್ದರು. (ವಿಟ್ಲ ಚಿತ್ರ)

ವಿಟ್ಲ: ಮನಸ್ಸು ಅರಿತು ಸ್ವಚ್ಛತೆಯನ್ನು ಕಾಪಾಡಿದಾಗ, ತಾನೂ ಸಮಾಜವೂ ಸ್ವಚ್ಛವಾಗುತ್ತದೆ. ಇಂದು ವಿದ್ಯಾರ್ಥಿಗಳಿಗೆ ದೈಹಿಕ ವ್ಯಾಯಾಮದ ಶಿಕ್ಷಣದ ಕೊರತೆಯಿದೆ. ಕ್ರೀಡೆ ದೈಹಿಕ ಬೆಳವಣಿಗೆಯನ್ನು ಸಾಧಿಸುತ್ತದೆ. ಕ್ರೀಡೋತ್ಸವವು ಮಾನವೀಯ ಮೌಲ್ಯದ ಕೊಂಡಿಯಾಗಿದೆ ಎಂದು ಒಡಿಯೂರು ಶ್ರೀಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.

 ಒಡಿಯೂರು ಗ್ರಾಮೋತ್ಸವದ ಅಂಗವಾಗಿ  ಭಾನುವಾರ ಏರ್ಪಡಿಸಿದ್ದ ಹೊರಾಂಗಣ ಸ್ಪರ್ಧೆಗಳನ್ನು ಒಡಿಯೂರು ಕ್ಷೇತ್ರದ ಕ್ರೀಡಾಂಗಣದಲ್ಲಿ ಉದ್ಘಾಟಿಸಿ, ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

 ಸಾಧ್ವೀ  ಮಾತಾನಂದಮಯೀ ಉಪಸ್ಥಿತರಿದ್ದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ಒಡಿಯೂರು ತುಳು ಕೂಟದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ್, ಒಡಿಯೂರುಶ್ರೀ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ ಅಂಕತ್ತಡ್ಕ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಬಿ.ಕೆ.ಚಂದ್ರಶೇಖರ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್, ಒಡಿಯೂರು ಗುರುದೇವ ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ತೀರ್ಪುಗಾರರಾದ ಸುರೇಶ್ ಗೌಡ, ರಾಜಗೋಪಾಲ್, ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಉಡುಪಿ ವಜ್ರಮಾತಾ ಮಹಿಳಾ ಘಟಕಾಧ್ಯಕ್ಷೆ ಶೋಭಾ ಶೆಟ್ಟಿ, ಕಾರ್ಯದರ್ಶಿ ಅಮಿತಾ ಗಿರೀಶ್, ವಾಸುದೇವ ಆರ್.ಕೊಟ್ಟಾರಿ, ಯಶವಂತ ವಿಟ್ಲ, ಲಿಂಗಪ್ಪ ಗೌಡ ಪನೆಯಡ್ಕ, ಬಬಿತಾ ಶೆಟ್ಟಿ, ಸದಾಶಿವ ಶೆಟ್ಟಿ ಒಡಿಯೂರು, ದೈಹಿಕ ಶಿಕ್ಷಣ ಶಿಕ್ಷಕ ಉದಯ ಕುಮಾರ್ ರೈ ಉಪಸ್ಥಿತರಿದ್ದರು. ಬಂಟ್ವಾಳ ತಾಲ್ಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ನಿರ್ವಹಿಸಿದರು.

ಸ್ಪರ್ಧೆ : ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಶಟಲ್ ಬ್ಯಾಡ್ಮಿಂಟನ್ ಸರ್ಧೆ, 6ರಿಂದ 10ನೇ ತರಗತಿಯವರೆಗಿನ ಬಾಲಕಿಯರಿಗೆ ಟೊಂಕ, 100ಮೀ. ಓಟ, ಶಟಲ್ ಬ್ಯಾಡ್ಮಿಂಟನ್, ಬಾಲಕರಿಗೆ ವಾಲಿಬಾಲ್, 100ಮೀ. ಓಟ, ಶಟಲ್ ಬ್ಯಾಡ್ಮಿಂಟನ್, 1 ರಿಂದ 5ನೇ ತರಗತಿಯ ಮಕ್ಕಳಿಗೆ ಕೆರೆದಡ, ಕಪ್ಪೆ ಜಿಗಿತ, ಬಾಲ್ ಪಾಸ್, ಯಾವುದಾದರೂ 3 ನೈಮಿತ್ತಿಕ ಶ್ಲೋಕಗಳನ್ನು ಹೇಳುವ ಸ್ಪರ್ಧೆಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !