‘ಆಯೋಗಗಳಿಂದ ಮಾನವ ಹಕ್ಕುಗಳ ರಕ್ಷಣೆ ಕೇವಲ ಭ್ರಮೆ’

7
‘ಮಾನವ ಹಕ್ಕುಗಳ ಇಂದಿನ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣದಲ್ಲಿ ಎಸ್‌.ಆರ್‌.ನಾಯಕ ಅಭಿಪ್ರಾಯ

‘ಆಯೋಗಗಳಿಂದ ಮಾನವ ಹಕ್ಕುಗಳ ರಕ್ಷಣೆ ಕೇವಲ ಭ್ರಮೆ’

Published:
Updated:
ನಗರದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಭಾನುವಾರ ಆಯೋಜಿಸಿದ್ದ ‘ಮಾನವ ಹಕ್ಕುಗಳ ಇಂದಿನ ಸ್ಥಿತಿ ಗತಿ’ ಕುರಿತ ವಿಚಾರ ಸಂಕಿರಣವನ್ನು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಉದ್ಘಾಟಿಸಿದರು. ಸಂಘಟನೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಸಿ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಹಾಗೂ ಅರ್ಥಶಾಸ್ತ್ರಜ್ಞ ಡಾ. ಕೇಶವ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಾನೂನಿನಡಿಯಲ್ಲಿ ಸ್ಥಾಪನೆಗೊಂಡ ಮಾನವ ಹಕ್ಕಗಳ ರಕ್ಷಣಾ ಆಯೋಗಗಳಿಂದ ಹಕ್ಕುಗಳ ಸಂರಕ್ಷಣೆ ಸಾಧ್ಯ ಎನ್ನುವದು ಕೇವಲ ಭ್ರಮೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಸ್‌.ಆರ್‌.ನಾಯಕ ಹೇಳಿದರು.  

ನಗರದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಭಾನುವಾರ ಆಯೋಸಿದ್ದ ‘ಮಾನವ ಹಕ್ಕುಗಳ ಇಂದಿನ ಸ್ಥಿತಿ ಗತಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.  ‘ಜನರಿಗೆ ಮಾನವ ಹಕ್ಕಗಳ ರಕ್ಷಣಾ ಆಯೋಗಗಳ ಅಸ್ತಿತ್ವದ ಪರಿಚಯ, ಅರಿವೂ ಇಲ್ಲ. ಇವುಗಳಿಂದ ಹಕ್ಕುಗಳ ಸಂರಕ್ಷಣೆ ಅಸಾಧ್ಯ. ಮಾನವ ಹಕ್ಕಗಳ ಆಯೋಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವಾಗ ಈ ಬಗ್ಗೆ ಅರಿತಿದ್ದೇನೆ. ಹಾಗಾಗಿ ಸಂಘ, ಸಂಸ್ಥೆಗಳು ವಂಚಿತ ಕೆಳಸ್ತರದ ಸಮುದಾಯ, ನಾಗರಿಕರನ್ನು ಜಾಗೃತಿಗೊಳಿಸಿದಾಗ ಮಾತ್ರ ಮಾನವ ಹಕ್ಕುಗಳ ಉದ್ದೀಪನೆ ಸಾಧ್ಯ’ ಎಂದರು. 

‘ಸಮಾಜೋದ್ಧಾರಕರ ಈ ನಾಡಿನಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಮಾನತೆ ಸಿಕ್ಕಿಲ್ಲ. ವಂಚಿತ ಸಮುದಾಯಗಳ ಸ್ಥಿತಿಗತಿ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಮಾನವ ಹಕ್ಕುಗಳನ್ನು ಬಲವಾಗಿ ಪ್ರತಿಷ್ಠಾಪಿಸ‌ಲೆಬೇಕಾದ ಅಗತ್ಯವಿದೆ’ ಎಂದೂ ಅವರು ಹೇಳಿದರು.  ಅರ್ಥಶಾಸ್ತ್ರಜ್ಞ ಡಾ.ಕೇಶವ ಮಾತನಾಡಿ,‘ಬಹುತ್ವದ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆ ಕಷ್ಟ ಸಾಧ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಕೈಮೀರುತ್ತಿದೆ. ಇನ್ನೊಬ್ಬರ ನೇರ, ನಿಷ್ಠುರ, ವಿಚಾರಗಳನ್ನು ಒಪ್ಪಿಕೊಳ್ಳಲೇಬೇಕಿಲ್ಲ. ಆದರೆ, ಅವರ ಮಾತನಾಡುವ ಹಕ್ಕುನ್ನು ಕನಿಷ್ಠ ಗೌರವಿಸಬೇಕಾದ ಸಾಮಾನ್ಯ ಜವಾಬ್ದಾರಿಯೂ ಇಲ್ಲದೆ, ವಿಚಾರವಾದಿಗಳ ಕೊಲೆ ಯತ್ನಕ್ಕೆ ಕೈಹಾಕುವಷ್ಟು ಮುಂದಾಗಿದ್ದೇವೆ ಎಂದರೆ, ದೇಶದ ಶಿಕ್ಷಣ ವ್ಯವಸ್ಥೆ ಕಲಿಸುತ್ತಿರುವುದಾದರೂ ಏನು..? ಎಂಬುದನ್ನು ಚಿಂತಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿ 15 ನಿಮಿಷಕ್ಕೆ ಒಂದು ನಿರ್ದಿಷ್ಟ ವರ್ಗದ ಮೇಲೆ ಹಲ್ಲೆ, ಪ್ರತಿ ಗಂಟೆಗೆ ಮಹಿಳೆಯರ ಮೇಲೆ 39 ಕ್ರೈಂಗಳು ನಡೆಯುತ್ತಿವೆ ಎಂದಾಗ ದೇಶದ ಸ್ಥಿತಿ ಏನಾಗುತ್ತಿದೆ...? ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ‌’ ಎಂದರು. ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮಾತನಾಡಿ, ‘ಉಳ್ಳವರಿಗೆ ಸಮಾನವಾಗಿ ಹಕ್ಕು, ಅವಕಾಶಗಳಿಂದ ವಂಚಿತರಾದ ತಳ ಸಮುದಾಯಗಳನ್ನು ಮೇಲೆತ್ತುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳನ್ನು ಗೌರವಿಸಬೇಕು’ ಎಂದು ಹೇಳಿದರು.

‘ಮಾನವ ಹಕ್ಕುಗಳನ್ನು, ರಾಜಕಾರಣಿಗಳು ತಮ್ಮ ಹಿಂಬಾಲಕರು, ಭ್ರಷ್ಟ ಅಧಿಕಾರಿಗಳು, ಶ್ರೀಮಂತರು, ಉದ್ಯಮಿಗಳನ್ನು ಸಲಹುವ ಹಕ್ಕುಗಳಾಗಿ ಪರಿವರ್ತಿಸಲು ಹವಣಿಸುತ್ತಿರುವುದು ನಿಜಕ್ಕೂ ದುರಂತ. ವಿದ್ಯೆ ಉಳ್ಳವರ ಸ್ವತ್ತು, ಸರ್ಕಾರ ಭ್ರಷ್ಟರ ಸ್ವತ್ತು, ವಾಕ್‌ ಸ್ವಾತಂತ್ರ್ಯ, ನೆಲ ಜಲ ಅಧಿಕಾರಿಗಳ ಮತ್ತು ಸಿರಿವಂತರ ಪಾಲಾಗುತ್ತಿವೆ’ ಎಂದು ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ ದೂರಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !