ರಕ್ತದಾನ ಮಾಡಿ, ಗಮನ ಸೆಳೆದ ಎಸ್‌ಪಿ

7
ಜಿಲ್ಲಾ ಸಶಸ್ತ್ರಮೀಸಲು ಪಡೆ: 2008ನೇ ಬ್ಯಾಚ್‌ನ ಸಿಬ್ಬಂದಿಯಿಂದ ದಶಮಾನೋತ್ಸವ ಆಚರಣೆ

ರಕ್ತದಾನ ಮಾಡಿ, ಗಮನ ಸೆಳೆದ ಎಸ್‌ಪಿ

Published:
Updated:
ಬಾಗಲಕೋಟೆಯಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ರಕ್ತದಾನ ಮಾಡಿದರು.

ಬಾಗಲಕೋಟೆ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) 2008ರ ಬ್ಯಾಚ್‌ನ ಸಿಬ್ಬಂದಿ ಭಾನುವಾರ ಇಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸ್ವತಃ ರಕ್ತದಾನ ಮಾಡಿ ಗಮನ ಸೆಳೆದರು.

ನವನಗರದ ಪೊಲೀಸ್ ಕವಾಯತು ಮೈದಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತಭಂಡಾರದ ಸಹಯೋಗದೊಂದಿಗೆ ಡಿಎಆರ್ ಸಿಬ್ಬಂದಿ ರಕ್ತದಾನ ಶಿಬಿರ ಮತ್ತು ಅನಾಥ ಮಕ್ಕಳಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ರಿಷ್ಯಂತ್, ‘ಯಾವುದೇ ಕ್ಷೇತ್ರವಿರಲಿ, ಅಲ್ಲಿ ಪ್ರತಿಯೊಬ್ಬರಿಗೂ ವೃತ್ತಿ ಪರಿಣಿತಿ ಅವಶ್ಯಕ. ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಸಮಾಜದಲ್ಲಿ ಪೊಲೀಸ್ ಸಿಬ್ಬಂದಿ ಪಾತ್ರ, ಜವಾಬ್ದಾರಿ ಏನೆಂಬುದು ಡಿಎಆರ್ ಘಟಕದ ಕಾರ್ಯ ವೈಖರಿಯಿಂದ ತಿಳಿಯುತ್ತದೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಎಲ್ಲಿಯೇ ಗದ್ದಲ, ಗಲಭೆ ನಡೆದರೂ ಮೊದಲು ಅಲ್ಲಿಗೆ ಡಿಎಆರ್ ಪೊಲೀಸರನ್ನು ಕರೆಸಲಾಗುತ್ತದೆ. ಅವರ ಪ್ರಯತ್ನದಿಂದಲೇ ಸಂಘರ್ಷಗಳು ತಿಳಿಗೊಳ್ಳುತ್ತವೆ. ವಿಪರ್ಯಾಸವೆಂದರೆ ಅವರಿಗೆ ಯಾವುದೇ ಪ್ರಶಂಸೆ ಸಿಗುವುದಿಲ್ಲ. ಅವರನ್ನು ಗುರುತಿಸುವುದಿಲ್ಲ. ಆದರೂ ತಮ್ಮ ಕಾರ್ಯಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಸಮಾಜದಲ್ಲಿ ಅವರ ಸೇವೆ ಅನನ್ಯವಾಗಿದೆ’ ಎಂದರು.

ಇದೇ ವೇಳೆ 2008ರ ಬ್ಯಾಚ್‌ನ ಹಲವು ಸಿಬ್ಬಂದಿ ತಮ್ಮ ಸೇವಾವಧಿಯ ನೆನಪುಗಳನ್ನು ಮೆಲುಕು ಹಾಕಿದರು. ತರಬೇತಿ ವೇಳೆಯ ಅನುಭವಗಳನ್ನು ಹಂಚಿಕೊಂಡರು. ನಂತರ ಸೇವಾಭಾರತಿ ಆಶ್ರಮದ ಮಕ್ಕಳಿಗೆ ಬಟ್ಟೆಗಳನ್ನು ವಿತರಣೆ ಮಾಡಿದರು. ಜೊತೆಗೆ ಡಿಎಆರ್‌ ಸಿಬ್ಬಂದಿಯೊಂದಿಗೆ ತಾವೂ ರಕ್ತದಾನ ಮಾಡಿದರು. 

ಡಿಎಆರ್ ಇನ್‌ಸ್ಪೆಕ್ಟರ್‌ಗಳಾದ ಜೆ.ಎಚ್.ಶೇಖ್, ಎ.ಎಸ್.ವಾರದ, ಡಾ.ವೀಣಾ ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !