ವರ್ಷಕ್ಕೆರಡು ಬಾರಿ ನೀಟ್‌ : ತಮಿಳುನಾಡು ವಿರೋಧ

7

ವರ್ಷಕ್ಕೆರಡು ಬಾರಿ ನೀಟ್‌ : ತಮಿಳುನಾಡು ವಿರೋಧ

Published:
Updated:

ಕೊಯಮತ್ತೂರು, ಚೆನ್ನೈ: ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ನಡೆಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ  ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ. 

ವಿರೋಧ ಪಕ್ಷ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದೆ. ಈ ನಿರ್ಧಾರದಿಂದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಗೊಂದಲ ಉಂಟಾಗಿದೆ ಎಂದು ಡಿಎಂಕೆ ಹೇಳಿದೆ. 

ವರ್ಷಕ್ಕೆ ಒಂದು ಬಾರಿ ನೀಟ್‌ ಪರೀಕ್ಷೆ ನಡೆಸಬೇಕು ಎಂಬ ನಿಲುವಿಗೆ ರಾಜ್ಯ ಬದ್ಧವಿರುವುದಾಗಿ ತಮಿಳುನಾಡು ಪ್ರೌಢಶಾಲಾ ಶಿಕ್ಷಣ ಸಚಿವ ಕೆ.ಎ.ಸೆಂಗೊಟ್ಟೈಯನ್ ತಿಳಿಸಿದ್ದಾರೆ. 

ಒಂದೇ ವರ್ಷದಲ್ಲಿ ವಿದ್ಯಾರ್ಥಿಗಳು ಎರಡು ಬಾರಿ ನೀಟ್‌ ಪರೀಕ್ಷೆ ಬರೆಯುವುದು ಸಾಧ್ಯವಾಗುವುದಿಲ್ಲ. ಆರು ತಿಂಗಳು ಕಡಿಮೆ ಅವಧಿಯಾಗಿರುತ್ತದೆ ಎಂದಿದ್ದಾರೆ. 

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ–ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆಗಳನ್ನು (ಜೆಇಇ ಮುಖ್ಯ) ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶನಿವಾರ ಘೋಷಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !