ಪೊಲೀಸರಿಗೆ ಹಲ್ಲೆಗೆ ಯತ್ನ: ಪ.ಪಂ ಸದಸ್ಯ ಸೇರಿ ಮೊಕದ್ದಮೆ; ನಾಲ್ವರ ಬಂಧನ

7

ಪೊಲೀಸರಿಗೆ ಹಲ್ಲೆಗೆ ಯತ್ನ: ಪ.ಪಂ ಸದಸ್ಯ ಸೇರಿ ಮೊಕದ್ದಮೆ; ನಾಲ್ವರ ಬಂಧನ

Published:
Updated:

ವಿಟ್ಲ: ಇಲ್ಲಿಯ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿ ಮಧ್ಯೆರಾತ್ರಿ 10 ಜನರ ಗುಂಪು ಗುಂಡಿನ ಪಾರ್ಟಿ ಮಾಡುತ್ತಿದ್ದ ವೇಳೆ ವಿಚಾರಿಸಲು ಬಂದ ವಿಟ್ಲ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ವಿಟ್ಲದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ನಾಲ್ವರು ಆರೋಪಿಗಳನ್ನು ಭಾನುವಾರ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಕೃಷ್ಣ, ಆತನ ಸಹೋದರ ಚಂದಪಾಡಿ ನಿವಾಸಿ ಅನೀಶ್‌, ಅಕ್ಷತ್‌, ಶ್ರೀಹರಿ, ಚಂದಳಿಕೆಯ ಪ್ರವೀಣ್, ಕೂಜಪ್ಪಾಡಿ ನಿವಾಸಿ ಗಣೇಶ್ ಪ್ರಸಾದ್‌ ,  ಮತ್ತು ಇತರ 5 ಮಂದಿ ಪೊಲೀಸರ ಮೇಲೆ ಹಲ್ಲೆ ಯತ್ನಿಸಿ,ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ  ಸಿಬ್ಬಂದಿ ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.  ಇವರಲ್ಲಿ  ಅನೀಶ್‌, ಗಣೇಶ ಪ್ರಸಾದ್‌,  ಅಕ್ಷತ್‌, ಪ್ರವೀಣ್‌ರನ್ನು ಬಂಧಿಸಲಾಗಿದೆ.

‘ವಿಟ್ಲ ಪೊಲೀಸ್ ಸಿಬ್ಬಂದಿಗಳಾದ ಅಶೋಕ್ ಎಸ್., ಪ್ರಸನ್ನ ಕುಮಾರ್ ಮತ್ತು ಜಯಂತ  ರಾತ್ರಿ 12.30 ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ 10 ಜನರ ಗುಂಪು  ಕೈಯಲ್ಲಿ ಬಿಯರ್ ಬಾಟಲಿ, ಸಿಗರೇಟು ಹಿಡಿದು ಬೊಬ್ಬೆ ಹಾಕಿ ಮೋಜಿ ಮಾಡುತ್ತಿದ್ದರೆನ್ನಲಾಗಿದೆ. ಪೊಲೀಸರು ಸ್ಥಳದಿಂದ ಜಾಗ ಖಾಲಿ ಮಾಡುವಂತೆ ಸೂಚಿಸಿದಾಗ,  ಅವರಲ್ಲೊಬ್ಬ  ಆಕ್ಷೇಪಿಸಿದ್ದ , ಇನ್ನೊಬ್ಬ ಪೊಲೀಸ್ ಸಿಬ್ಬಂದಿ ಅಶೋಕ್ ಘಟನೆಯ ವಿಡಿಯೊ ಚಿತ್ತಿಸುತ್ತಿದ್ದಾಗ ಮೊಬೈಲ್ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆಗೆ ಮುಂದಾಗಿದ್ದಾರೆಂದು’ ದೂರಿನಲ್ಲಿ ತಿಳಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !