ಸುಳ್ಯ: ಲಘು ಭೂಕಂಪ

7

ಸುಳ್ಯ: ಲಘು ಭೂಕಂಪ

Published:
Updated:

ಸುಳ್ಯ: ಇಲ್ಲಿನ ತಾಲ್ಲೂಕಿನ ಮಡಪ್ಪಾಡಿ, ಕೊಲ್ಲಮೊಗ್ರು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ಹೇಳಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಲಘು ಭೂಕಂಪದ ಅನುಭವ ಆಗಿದೆ.  ಇದೇ ವೇಳೆ ಸುಳ್ಯ ವ್ಯಾಪ್ತಿಯ ಮಡಪ್ಪಾಡಿ, ಹರಿಹರಪಲ್ಲತ್ತಡ್ಕ, ಐನೆಕಿದು, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು ಭಾಗಗಳಲ್ಲಿ ಮಧ್ಯಾಹ್ನ 12.50ರಿಂದ 1.10ರ ಅವಧಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಕೆಲವು ಸೆಕೆಂಡುಗಳ ಕಾಲ ಗುಡುಗುತ್ತಾ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಕೆಲ ವಸ್ತುಗಳು ಅಲುಗಾಡಿದೆ ಎನ್ನಲಾಗಿದೆ. ಕಂಪನದ ಅನುಭವವನ್ನು ಸೂರಜ್ ಹೊಸೂರು ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !