ಮಿಲಾಗ್ರಿಸ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ

7
ರಸ್ತೆಯಲ್ಲಿ ವಾಹನ ನಿಲುಗಡೆಯಿಂದ ತೊಂದರೆ

ಮಿಲಾಗ್ರಿಸ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ

Published:
Updated:
ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದ ಎದುರಿನ ರಸ್ತೆಯ ಮೇಲೆ ಸೋಮವಾರ ಮಧ್ಯಾಹ್ನ ನಿಲ್ಲಿಸಿದ್ದ ಕಾರುಗಳ ಚಕ್ರಗಳಿಗೆ ಲಾಕ್‌ ಅಳವಡಿಸಿದ ಸಂಚಾರ ವಿಭಾಗದ ಪೊಲೀಸರು, ವಾಹನ ಮಾಲೀಕರಿಗೆ ದಂಡ ವಿಧಿಸಿದರು.

ಮಂಗಳೂರು: ನಗರದ ಮಿಲಾಗ್ರಿಸ್‌ ಚರ್ಚ್‌ ಆವರಣದಲ್ಲಿರುವ ಮಿಲಾಗ್ರಿಸ್‌ ಸಭಾಂಗಣದಲ್ಲಿ ವಾಹನ ನಿಲುಗಡೆಗೆ ಮೀಸಲಿರುವ ಸ್ಥಳಾವಕಾಶವನ್ನು ಬಳಸಿಕೊಳ್ಳದೇ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಸಭಾಂಗಣದ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಿಲಾಗ್ರಿಸ್ ಸಭಾಂಗಣದಲ್ಲಿ ಸಮಾರಂಭಗಳು ನಡೆಯುವ ಬಹುತೇಕ ಸಂದರ್ಭದಲ್ಲಿ ಎದುರಿನ ರಸ್ತೆಯ ಮೇಲೆ ವಾಹನ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಅಲ್ಲಿ ವಿಪರೀತವಾದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸೋಮವಾರ ಕೂಡ ಅದೇ ಪರಿಸ್ಥಿತಿ ಇತ್ತು.

ಮಂಗಳೂರು ಪೂರ್ವ ಸಂಚಾರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆಯ ಮೇಲೆ ನಿಲ್ಲಿಸಿದ್ದ 25ಕ್ಕೂ ಹೆಚ್ಚು ಕಾರುಗಳಿಗೆ ಲಾಕ್‌ ಅಳವಡಿಸಿದರು. ನಂತರ ಎಲ್ಲ ವಾಹನಗಳ ಮಾಲೀಕರಿಗೂ ದಂಡ ವಿಧಿಸಿದರು. ಸಂಚಾರ ದಟ್ಟಣೆಗೆ ಕಾರಣವಾದ ಹಲವು ಕಾರುಗಳ ಮಾಲೀಕರಿಗೂ ದಂಡ ವಿಧಿಸಿದರು.

ಬಳಿಕ ಮಂಗಳೂರು ಪೂರ್ವ ಸಂಚಾರ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ನರೇಂದ್ರ ನೀಡಿದ ದೂರನ್ನು ಆಧರಿಸಿ, ಸಾರ್ವಜನಿಕರಿಗೆ ತೊಂದರೆ ಮಾಡಿದ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಿಲಾಗ್ರಿಸ್‌ ಸಭಾಂಗಣದ ಆಡಳಿತ ಮಂಡಳಿ ಮತ್ತು ಆಡಳಿತಾಧಿಕಾರಿ ವಿರುದ್ಧ ‍ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ. ರಸ್ತೆ ಮೇಲೆ ನಿಲ್ಲಿಸಿದ್ದ ಕಾರುಗಳ ಮಾಲೀಕರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !