6

15ರಂದು ‌ ಕೆಸರ್ಡೊಂಜಿ ದಿನ

Published:
Updated:

ವಿಟ್ಲ: ವಿಟ್ಲದ ಇಟ್ಟೆಲ್ ತುಳುವೆರೆ ಕೂಟದ ವತಿಯಿಂದ ‘ಬರ್ಸೊಗು ಕೆಸರ್ಡೊಂಜಿ ದಿನ ಕೆಸರ್ದ ಕಂಡೊಡು ತುಳುನಾಡ್ದ ಗೊಬ್ಬುಲೆ ಪಂತೊ’ ಕಾರ್ಯಕ್ರಮ ಇದೇ 15ರಂದು ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ತೇರಿನ ಗದ್ದೆಯಲ್ಲಿ ನಡೆಯಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ಎಂ ವಿಟ್ಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ‘ಕೆಸರಿನಗದ್ದೆಯಲ್ಲಿ ವಿಶೇಷವಾಗಿ ಮುಳಿಯ ನಿಧಿಶೋಧನೆ ನಡೆಯಲಿದ್ದು, ಬಹುಮಾನ ಚಿನ್ನದ ನಾಣ್ಯವನ್ನು ಮುಳಿಯ ಜ್ಯುವೆಲ್ಲರಿ ನೀಡಲಿದೆ. ಹಗ್ಗ ಜಗ್ಗಾಟ, ತೆಂಗಿನಕಾಯಿ ಬಿಸಾಡುವುದು, ಮಡಿಕೆ ಒಡಿಯುವುದು, ಕೆಸರುಗದ್ದೆ ಓಟ, ಉಪ್ಪುಗೋಣಿ ಓಟ (ದಂಪತಿಗಳಿಗೆ), ಹಾಳೆಯಲ್ಲಿ ಎಳೆಯುವುದು ಸೇರಿ ವಿವಿಧ ಸ್ಪರ್ಧೆಗಳು, ಇತರ ಸ್ಪರ್ಧೆಯಾಗಿ ಬೀಡಿ ಕಟ್ಟುವುದು, ಮುಡಿ ಕಟ್ಟುವುದು, ಹಲ್ಲಿನಲ್ಲಿ ತೆಂಗಿನಕಾಯಿ ಸುಲಿಯುವುದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಇಟ್ಟೆಲ್ ತುಳುವೆರೆ ಕೂಟದ ಅಧ್ಯಕ್ಷ ಹರೀಶ್ ಸಿ ಎಚ್ ಅಧ್ಯಕ್ಷತೆ ವಹಿಸುವರು. ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ರೈ, ಉದ್ಯಮಿ ಸುಬ್ರಾಯ ಪೈ, ವಕೀಲ ರತ್ನಾಕರ ಶೆಟ್ಟಿ, ಉದ್ಯಮಿ ದೇಜಪ್ಪ ಪೂಜಾರಿ ನಿಡ್ಯ, ವಿಟ್ಲ ಲಾರಿ ಮಾಲಕರ ಸಂಘದ ಅಧ್ಯಕ್ಷ ರಮೇಶ ವರಪ್ಪಾದೆ, ಜಿಲ್ಲಾ ಬಜರಂಗದಳ ಸಹಸಂಚಾಲಕ ಜಯಂತ ಸಿ ಎಚ್ ವಿಟ್ಲ, ವಿಟ್ಲ ಪ್ರಖಂಡ ಬಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಭಾಗವಹಿಸುವರು ಎಂದರು.

ಸಮಾರೋಪದಲ್ಲಿ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಹರೀಶ್ ಸಿ ಎಚ್ ಅಧ್ಯಕ್ಷತೆವಹಿಸಲಿದ್ದಾರೆ. ಕುಕ್ಕಾಜೆ ದೇವಳದ ಧರ್ಮದರ್ಶಿ ಕೃಷ್ಣ ಗುರೂಜಿ, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್‌, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ನಾಗೇಶ್ ಶೆಟ್ಟಿ, ಮೋಹನ್ ಕಾಯರ್‌ಮಾರ್, ಉದ್ಯಮಿ ಸಂಜೀವ ಪೂಜಾರಿ ಭಾಗವಹಿಸುವರು ಎಂದರು.

ಇಟ್ಟೆಲ್ ತುಳುವೆರೆ ಕೂಟದ ಅಧ್ಯಕ್ಷ ಹರೀಶ್ ಸಿ ಎಚ್, ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಜಯಂತ ಸಿ ಎಚ್ ವಿಟ್ಲ, ನಾಗೇಶ್ ಬಸವನಗುಡಿ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !