ಅಕ್ಷರ ದಾಸೋಹ ನೌಕರರ ಸಭೆ

7

ಅಕ್ಷರ ದಾಸೋಹ ನೌಕರರ ಸಭೆ

Published:
Updated:
ಬೆಳ್ತಂಗಡಿಯಲ್ಲಿ ಈಚೆಗೆ ಅಕ್ಷರ ದಾಸೋಹ ನೌಕರ ಸಂಘದ ತಾಲೂಕು ಸಭೆ ನಡೆಯಿತು. (ಬೆಳ್ತಂಗಡಿ ಸಭೆ)

ಬೆಳ್ತಂಗಡಿ: ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಬೆಳ್ತಂಗಡಿ ತಾಲ್ಲೂಕು ಸಭೆ ಸೋಮವಾರ ಇಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಅಕ್ಷರ ದಾಸೋಹ ನೌಕರ ಸಂಘದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಅವರು, ‘ಸಿ.ಐ.ಟಿ.ಯು ನಿರಂತರ ಹೊರಟ ನಡೆಸಿದರೂ ಸರ್ಕಾರ ತಿಂಗಳಿಗೆ ₹ 500 ಮಾತ್ರ ಏರಿಕೆ ಮಾಡಿದೆ. ಕನಿಷ್ಠ ವೇತನ ಪ್ರತಿ ತಿಂಗಳಿಗೆ ₹5ಸಾವಿರ ನಿಗದಿ ಪಡಿಸಲು ಸಂಘದಿಂದ ಹೋರಾಟ ಮಾಡುತ್ತಿದ್ದೇವೆ’ ಎಂದರು.

ಅಕ್ಷರ ದಾಸೂಹ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜ ಮೂಡಬಿದ್ರೆ ಮಾತನಾಡಿ, ರಾಜ್ಯದಲ್ಲಿ 1.16.000 ಮಹಿಳೆಯರು ಮಧ್ಯಾಹ್ನ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟ ಬಡಿಸುವ ಕೆಲಸದಲ್ಲಿ, ಕನಿಷ್ಠ ವೇತನ ಸೇವಾ ಭದ್ರತೆ ಇಲ್ಲದೆ ದುಡಿಯುತ್ತಾರೆ. ಅಕ್ಷರ ದಾಸೋಹ ನೌಕರರನ್ನು ಡಿ ಗ್ರೂಪ್ ಸರಕಾರಿ ನೌಕರರನ್ನಾಗಿ ಪರಿಗಣಸಬೇಕಾಗಿದೆ ಎಂದು ಆಗ್ರಹಿಸಿದರು.

 ಸಭೆಯ ಅಧ್ಯಕ್ಷತೆಯನ್ನು  ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಲಲಿತಾ ವಹಿಸಿದರು. ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷ ಶಿವಕುಮಾರ್ ಎಸ್.ಎಂ., ಕಾರ್ಯದರ್ಶಿ ವಸಂತ ನಡ, ಸಂಗಾತಿ ಹರಿದಾಸ್ ಎಸ್.ಎಂ., ಕೃಷಿ ಕೂಲಿಗಾರರ ಸಂಘದ ಅಧ್ಯಕ್ಷ ಅನಿಲ್ ಎಂ. ಮಾತನಾಡಿದರು.

 ಮಹಿಳಾ ನಾಯಕಿ ಸುಕನ್ಯಾ ಎಚ್., ಸಿಐಟಿಯು ರಾಜ್ಯ ಸಮಿತಿ ಸದಸ್ಯರಾದ ರೋಹಿಣಿ ಪೆರಾಡಿ, ಪದ್ಮಾವತಿ, ಸುಧಾ ಕೆ. ರಾವ್, ಶ್ವೇತಾ, ಉಪಾಧ್ಯಕ್ಷೆ ಸರೋಜ ಗೇರುಕಟ್ಟೆ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸುಮಿತ್ರ ಸ್ವಾಗತಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !