7

ಅಪಾಯಕಾರಿ ವಿದ್ಯುತ್ ಪರಿವರ್ತಕ

Published:
Updated:

ಬದಿಯಡ್ಕ : ಕರಿಂಬಿಲದಲ್ಲಿ ವಿದ್ಯುತ್ ಪರಿವರ್ತಕವೊಂದು ಆವರಣ ಬೇಲಿಯಿಲ್ಲದೆ, ಅಪಾಯಸೂಚಕ ಫಲಕವೂ ಇಲ್ಲದೆ ಇರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಈ ಪ್ರದೇಶದಲ್ಲೇ ಬಸ್ ತಂಗುದಾಣವಿದ್ದು, ಮಕ್ಕಳು ಹಾಗೂ ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಬಸ್ಸಿಗಾಗಿ ಕಾದಿರುತ್ತಾರೆ. ಈ ಪರಿವರ್ತಕದ ಫ್ಯೂಸ್‌ಗಳಿಗೆ ಕವಚಗಳಿಲ್ಲದಿರುವುದರಿಂದ ಮಳೆಗಾಲದಲ್ಲಿ  ಅಪಾಯ ಹೆಚ್ಚಿದೆ. ಸಿಡಿಲಿನ ಸಂದರ್ಭದಲ್ಲಿ ಈ ವಿದ್ಯುತ್ ಪರಿವರ್ತಕದಿಂದ ಬೆಂಕಿ ಏಳುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 ಕೂಡಲೇ ಅಧಿಕಾರಿಗಳು ಸೂಕ್ತ ಸುರಕ್ಷತೆಯ ವ್ಯವಸ್ಥೆಗಳನ್ನು ಏರ್ಪಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !