ಸರೋಜಿನಿ ಮಹಿಷಿ ವರದಿಗೆ ಕಾಯ್ದೆ ರೂಪ ನೀಡಲಿ

7
ಕದಂಬ ಸೈನ್ಯ ಸಂಘಟನೆ ಅಧ್ಯಕ್ಷ ಬೇಕ್ರಿ ರಮೇಶ ಒತ್ತಾಯ

ಸರೋಜಿನಿ ಮಹಿಷಿ ವರದಿಗೆ ಕಾಯ್ದೆ ರೂಪ ನೀಡಲಿ

Published:
Updated:

ಶಿರಸಿ: ಕನ್ನಡಿಗರಿಗೆ ಅನುಕೂಲಕರವಾಗಿರುವ ಡಾ.ಸರೋಜಿನಿ ಮಹಿಷಿ ವರದಿಗೆ ಮರುಜೀವ ಬಂದಿದ್ದು, ವರದಿಯ ಪರಿಷ್ಕೃತ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಪೂರ್ವದಲ್ಲಿ, ಅದನ್ನು ಸದನದಲ್ಲಿ ಮಂಡಿಸಿ ಕಾಯ್ದೆ ಸ್ವರೂಪ ನೀಡಬೇಕು ಎಂದು ಕದಂಬ ಸೈನ್ಯ ಸಂಘಟನೆ ಒತ್ತಾಯಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಬೇಕ್ರಿ ರಮೇಶ ಅವರು, ‘31 ವರ್ಷಗಳಿಂದ ದೂಳು ತಿನ್ನುತ್ತಿದ್ದ ಸರೋಜಿನಿ ಮಹಿಷಿ ಮೂಲ ವರದಿಗೆ, 14 ಪ್ರಮುಖ ಶಿಫಾರಸು ಇರುವ ಪರಿಷ್ಕೃತ ವರದಿಯನ್ನು 2017ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ವರದಿಗೆ ಮತ್ತೆ ಜೀವ ಬಂದಿದ್ದು, ವರದಿಯ ಪರಿಷ್ಕೃತ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗಾವಕಾಶ ಒದಗಿಸಲು ಪೂರಕವಾಗುವ ಕಾನೂನಿಗೆ ತಿದ್ದುಪಡಿ ತರುವ, ರಾಜ್ಯದಲ್ಲಿ ಕನ್ನಡದಲ್ಲೇ ವ್ಯವಹರಿಸಬೇಕು ಎನ್ನುವ ಅಂಶಗಳೂ ಸೇರಿದಂತೆ, ಹಲವಾರು ಸಂಗತಿಗಳನ್ನು ಒಳಗೊಂಡ ವರದಿಯನ್ನು ಪ್ರೊ ಎಸ್.ಜಿ. ಸಿದ್ದರಾಮಯ್ಯ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿ ಜಾರಿಗೆ ತರಲು ಬಿಜೆಪಿ ಕೂಡ ಬೆಂಬಲ ನೀಡಬೇಕು. ರಾಜ್ಯದ ಎಲ್ಲ ಪಕ್ಷಗಳು ನಿಷ್ಪಕ್ಷಪಾತವಾಗಿ ಇದಕ್ಕೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಸಂಬಂಧಿಸಿ ಕದಂಬ ಸೈನ್ಯ ನಡೆಸಲಿರುವ ಹೋರಾಟಕ್ಕೆ ರಾಜ್ಯದ ರೈತ ಸಂಘಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸಹಕಾರ ನೀಡಬೇಕು. ಸರೋಜಿನಿ ಮಹಿಷಿ ವರದಿಗೆ ಆಗ್ರಹಿಸಿ ಬನವಾಸಿಯಿಂದ ಆಂದೋಲನ ಆರಂಭಿಸಲಾಗುತ್ತಿದ್ದು, ಪ್ರಮುಖವಾಗಿ ಕನ್ನಡ ಸಾಹಿತ್ಯ ಪರಿಷತ್ ಈ ಹೋರಾಟದ ನೇತೃತ್ವ ವಹಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಸಂಚಾಲಕ ಉದಯಕುಮಾರ ಕಾನಳ್ಳಿ, ಉಪಾಧ್ಯಕ್ಷ ಎಸ್.ಬಿ.ಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಮೋಹನದಾಸ ನಾಯಕ, ಪ್ರಮುಖರಾದ ಎಸ್.ಶಿವಕುಮಾರ, ಉಮ್ಮಡಹಳ್ಳಿ ನಾಗೇಶ, ಗುತ್ಯಪ್ಪ ಮಾದರ, ನಿತ್ಯಾನಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !