‘ಉಬರ್‌ ಬಳಕೆ: ಬೆಂಗಳೂರಿಗೆ 5ನೇ ಸ್ಥಾನ’

7

‘ಉಬರ್‌ ಬಳಕೆ: ಬೆಂಗಳೂರಿಗೆ 5ನೇ ಸ್ಥಾನ’

Published:
Updated:

ಬೆಂಗಳೂರು:‘ಜಾಗತಿಕ ಮಟ್ಟದಲ್ಲಿ ಉಬರ್‌ ಸಾರಿಗೆ ವಾಹನಗಳನ್ನು ಬಳಸುವ 30 ನಗರಗಳ ಪೈಕಿ ಬೆಂಗಳೂರು 5ನೇ ಸ್ಥಾನದಲ್ಲಿದೆ’ ಎಂದು ದಕ್ಷಿಣ ಭಾರತ ಮತ್ತು ಕೊಲಂಬೊ ಉಬರ್‌ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಕ್ರಿಶ್ಚಿಯನ್ ಫ್ರೀಸ್’ ಹೇಳಿದರು.

ನಗರದ ಯೂರೋಪಿನ ಬಿಟಿಎಸ್ ಸಂಸ್ಥೆ ಮತ್ತು ಭಾರತದ ಜಿಐಎಸ್‍ಟಿ ಸಂಸ್ಥೆಗಳು ಜಂಟಿಯಾಗಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ದಿ ಇಂಡಿಯನ್ ಅಡ್ವಾನ್‍ಟೆಜ್ ಸಮ್ಮೇಳನದಲ್ಲಿ ಅವರು ಮಾತನಾಡಿದರು. 

‘‌2016ರಲ್ಲಿ ಉಬರ್‌ ಪೋಲ್‌ ಸಾರ್ವಜನಿಕ ಸಾರಿಗೆ ಬಳಕೆಯಿಂದ ಭಾರತೀಯರು ಸುಮಾರು ₹47 ಕೋಟಿ ಹಣ ಉಳಿತಾಯ ಮಾಡಿದ್ದಾರೆ. ಈ ಮೂಲಕ ಉಬರ್‌ ಸಂಸ್ಥೆ ಸ್ಮಾರ್ಟ್‌ ಸಿಟಿಗಳ ಸಾರಿಗೆ ದಟ್ಟಣೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು. 

‘ಬಾಷ್‌ ಕಂಪನಿ ಪರಿಚಯಿಸಿದ ‘ಎಲೆಕ್ಟ್ರೋ ಹೈಡ್ರಾಲಿಕ್‌ ಮೂಮೆಂಟ್‌ ಬ್ರಿಡ್ಜ್‌ ಸಿಸ್ಟಮ್‌’ನಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸಂಚಾರಿ ಬ್ರಿಜ್‌ಗಳ ಕುಸಿತ ತಪ್ಪಿಸಬಹುದು. ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಗಾಗಿ ಸ್ಮಾರ್ಟ್‌ ಸಿಟಿಗಳಲ್ಲಿ ಕೌಶಲ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ’ ಎಂದು ಜರ್ಮನಿಯ ಎಂಜಿನಿಯರಿಂಗ್‌ ಫೆಡರೆಷನ್‌ನ ದಕ್ಷಿಣ ಭಾಗದ ಪ್ರಾದೇಶಿಕ ಮುಖ್ಯಸ್ಥ ಎಸ್‌.ಮನೋಹರ್‌ ಹೇಳಿದರು. 

‘ದೇಶದಾದ್ಯಂತ ನೂರು ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಒಂದು ಹೆಜ್ಜೆ ಮುಂದೆ ಸರಿದಿದೆ. ‘ಸ್ಮಾರ್ಟ್‌ ಸಿಟಿ’ಗಳಾಗಲಿರುವ ಒಟ್ಟು 98 ನಗರಗಳ ಪಟ್ಟಿಯನ್ನು ಕೇಂದ್ರ ಬಿಡುಗಡೆ ಮಾಡಿದ್ದು, ಇವುಗಳ ಪೈಕಿ ಕರ್ನಾಟಕದ ಆರು ನಗರಗಳಿವೆ. ದೇಶದ ವಿವಿಧ ರಾಜ್ಯಗಳ 24 ರಾಜಧಾನಿ ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ನಿರ್ಧರಿಸಿದೆ’. 

‘ಸ್ಮಾರ್ಟ್‌ ಸಿಟಿಗಳಿಗೆ ಬೇಕಾದ ಸ್ಮಾರ್ಟ್‌ ತಂತ್ರಜ್ಞಾನ, ಯೋಜನೆಗಳ ಚೌಕಟ್ಟು ರೂಪಿಸುವ ದೃಷ್ಟಿಯಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇಡೀ ದೇಶಕ್ಕೆ ಬೆಂಗಳೂರು ಮಾರ್ಗದರ್ಶಿಯಾಗುವ ನಿಟ್ಟಿನಲ್ಲಿ ಸುಸ್ಥಿರ ನಗರ ನಿರ್ಮಾಣ, ಸಂಪನ್ಮೂಲಗಳ ಮಿತಬಳಕೆ ಯೋಜನೆಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಹಕಾರ ನೀಡಿದೆ’ ಎಂದು ಬಾವರಿಯನ್‌– ಇಂಡಿಯನ್‌ ಸೆಂಟರ್‌ನ ಹಿರಿಯ ಸಲಹೆಗಾರ ಜೋಸ್‌ ಜಾಕೋಬ್‌ ತಿಳಿಸಿದರು.

ಸುಮಾರು 12 ದೇಶಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 35ಕ್ಕೂ ಹೆಚ್ಚು ತಜ್ಞರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !