ಅಡಿಕೆ ತೋಟಕ್ಕೆ ಆನೆ ಹಿಂಡು ದಾಳಿ: ಅಪಾರ ನಷ್ಟ

7

ಅಡಿಕೆ ತೋಟಕ್ಕೆ ಆನೆ ಹಿಂಡು ದಾಳಿ: ಅಪಾರ ನಷ್ಟ

Published:
Updated:
ನರಸಿಂಹರಾಜಪುರ ತಾಲ್ಲೂಕು ಮಡಬೂರು ಗ್ರಾಮದ ಬಳುವಳ್ಳಿ ನಿವಾಸಿ ಜಯಮ್ಮ ಅವರ ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳು ಗಿಡಗಳನ್ನು ಮುರಿದು ಹಾಕಿವೆ.

ಮಡಬೂರು (ಎನ್.ಆರ್.ಪುರ): ತಾಲ್ಲೂಕಿನ ಮಡಬೂರು ಗ್ರಾಮದ ಬಳುವಳ್ಳಿಯಲ್ಲಿ ಆನೆಗಳ ಹಿಂಡು ಅಡಿಕೆ ತೋಟಕ್ಕೆ ದಾಳಿ ಮಾಡಿ ಲಕ್ಷಾಂತರೂ ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರಾದ ಜಯಮ್ಮ ತಿಳಿಸಿದ್ದಾರೆ.

ಬಳುವಳ್ಳಿಯ ಜಯಮ್ಮ ಅವರ ತೋಟಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ನಾಲ್ಕು ಆನೆಗಳು ನಿರಂತರ ದಾಳಿ ಮಾಡಿ ಹಿಂಗಾರು ಬಿಡುವ ಸುಮಾರು 250 ಅಡಿಕೆ ಗಿಡಗಳನ್ನು ಮುರಿದು ಧರೆಗುರುಳಿಸಿವೆ. ಇದರಿಂದಾಗಿ ₹6 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಅರಣ್ಯ ಇಲಾಖೆಯವರು ಕೂಡಲೇ ಇತ್ತ ಗಮನಹರಿಸಿ ಆನೆಗಳನ್ನು ಕಾಡಿಗೆ ಓಡಿಸುವ ಮೂಲಕ ರೈತರ ಬೆಳೆಹಾನಿ ತಪ್ಪಿಸಬೇಕು. ಈಗಾಗಲೇ ನಷ್ಟ ಉಂಟು ಮಾಡಿರುವ ತೋಟದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !