ಬ್ಯಾಸ್ಕೆಟ್‌ ಬಾಲ್‌: ಸಾಯ್‌, ರಾಜ್‌ಕುಮಾರ್ ತಂಡಗಳಿಗೆ ಗೆಲುವು

7

ಬ್ಯಾಸ್ಕೆಟ್‌ ಬಾಲ್‌: ಸಾಯ್‌, ರಾಜ್‌ಕುಮಾರ್ ತಂಡಗಳಿಗೆ ಗೆಲುವು

Published:
Updated:

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ಕೇಂದ್ರ ಮತ್ತು ಬೆಂಗಳೂರಿನ ರಾಜಕುಮಾರ್ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡಗಳು 16 ವರ್ಷದೊಳಗಿನವರ ರಾಜ್ಯ ಯುವ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಬುಧವಾರ ಜಯ ಸಾಧಿಸಿದವರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸಾಯ್ ತಂಡದವರು ಅರ್ಪಣ್ ಅವರ ಅಮೋಘ ಆಟದ ನೆರವಿನಿಂದ ಕೋರಮಂಗಲ ತಂಡವನ್ನು 53–41ರಿಂದ ಮಣಿಸಿದರು. ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಎಂಸಿಎಚ್‌ಎಸ್‌ 49–25ರಿಂದ ರಾಜಮಹಲ್‌ ಬ್ಯಾಸ್ಕೆಟ್‌ಬಾಲ್ ತಂಡವನ್ನು, ದೇವಾಂಗ ಯೂನಿಯನ್‌ 42–28ರಿಂದ ಡಿಆರ್‌ಡಿಒ ತಂಡವನ್ನು, ವೈಎಂಎಂಎ 52–43ರಿಂದ ಪಟ್ಟಾಭಿ ಸ್ಪೋರ್ಟ್ಸ್ ಕ್ಲಬ್‌ ತಂಡವನ್ನು, ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ 53–14ರಿಂದ ಕೋಲಾರದ ಕನಕ ತಂಡವನ್ನು, ಜೆಎಸ್‌ಸಿ 41–26ರಿಂದ ಬಾಗಲಕೋಟೆ ಬ್ಯಾಸ್ಕೆಟ್‌ಬಾಲ್ ತಂಡವನ್ನು, ವಿವೇಕ್‌ ಸ್ಪೋರ್ಟ್ಸ್ ಕ್ಲಬ್‌ 35–10ರಿಂದ ಸಿಜೆಸಿ ತಂಡವನ್ನು ಮಣಿಸಿತು.

ಬಾಲಕಿಯರ ಪಂದ್ಯಗಳಲ್ಲಿ ಮಂಡ್ಯದ ಡಿವೈಇಎಸ್‌ 32–5ರಿಂದ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡವನ್ನು, ಭರತ್‌ ಎಸ್‌ಯು 41–17ರಿಂದ ಧಾರವಾಡದ ರೋವರ್ಸ್ ತಂಡವನ್ನು, ಎನ್‌ಜಿವಿಬಿಸಿ 50–38ರಿಂದ ರಾಜಮಹಲ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ಅನ್ನು, ಬಿ.ಸಿ ಬಿ.ಸಿ 35–11ರಿಂದ ಐಬಿಬಿಸಿ ತಂಡವನ್ನು, ಪಟ್ಟಾಭಿ ಸ್ಪೋರ್ಟ್ಸ್ ಕ್ಲಬ್‌ 34–15ರಿಂದ ಎಸ್‌.ಬ್ಲೂಸ್‌ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !