ಪ್ರೀತಿಯಿಂದ ಕೆಲಸ ಮಾಡಿ: ನಿವೃತ್ತ ಸರ್ಕಾರಿ ನೌಕರ ಸುಭಾಸ ಯರಕಿಹಾಳ ಸಲಹೆ

7

ಪ್ರೀತಿಯಿಂದ ಕೆಲಸ ಮಾಡಿ: ನಿವೃತ್ತ ಸರ್ಕಾರಿ ನೌಕರ ಸುಭಾಸ ಯರಕಿಹಾಳ ಸಲಹೆ

Published:
Updated:
Deccan Herald

ಹುಣಸಗಿ: ‘ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶ ಕೆಲವರಿಗೆ ಮಾತ್ರ ಲಭಿಸುತ್ತದೆ. ಹಾಗಾಗಿ ವೃತ್ತಿ ಜೀವನದಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ನಿವೃತ್ತ ನೌಕರ ಸುಭಾಸ ಯರಕಿಹಾಳ ಸಲಹೆ ನೀಡಿದರು.

ಹುಣಸಗಿ ಪಟ್ಟಣದ ಕೆಬಿಜೆಎನ್‌ಎಲ್‌ ಕಾರ್ಯಾಗಾರ ಹಾಗೂ ಯಾಂತ್ರಿಕ ವಿಭಾಗದಲ್ಲಿ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಭಾಸ ಯರಕಿಹಾಳ ಅವರು ಈಚೆಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಅಧಿಕಾರಿಗಳ ಸಹಕಾರದಿಂದ ಒಳ್ಳೆಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹುಣಸಗಿಯಲ್ಲಿನ ಸೇವೆ ಮರೆಯುವಂತಿಲ್ಲ’ ಎಂದರು.

ವಿಭಾಗ ಕಚೇರಿಯ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಮೋಹನ್ ಮಾತನಾಡಿ, ‘ಸರ್ಕಾರಿ ನೌಕರರು ಮೊದಲು ತಾವು ನಿರ್ವಹಿಸುತ್ತಿರುವ ಕರ್ತವ್ಯವನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಈ ನಿಟ್ಟಿನಲ್ಲಿ ಸುಭಾಸ ಯರಕಿಹಾಳ ಅವರು ತಮ್ಮ ಸೇವಾವಧಿಯಲ್ಲಿ ಇಲ್ಲಿನ ಸಿಬ್ಬಂದಿಗಳಿಗೆ ಹಿರಿಯ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು.

ಹುಣಸಗಿ ಉಪ ಖಜಾನೆ ಅಧಿಕಾರಿ ಧನೇಶನಾಯಕ್, ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಗಣಪತಿ, ವಿಜಯಾಚಾರ್ಯ ಬೈಚಬಾಳ ಇದ್ದರು. ಹರೀಶ ಕುಲಕರ್ಣಿ ನಿರೂಪಿಸಿದರು. ಬಸವರಾಜ ಸಂದಿಮನಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !