ನಗರ ಸ್ಥಳೀಯ ಸಂಸ್ಥೆ ವಾರ್ಡ್‌ವಾರು ಮೀಸಲಾತಿ ಪ್ರಕಟ

7

ನಗರ ಸ್ಥಳೀಯ ಸಂಸ್ಥೆ ವಾರ್ಡ್‌ವಾರು ಮೀಸಲಾತಿ ಪ್ರಕಟ

Published:
Updated:

ಕೋಲಾರ: ನಗರಾಭಿವೃದ್ಧಿ ಇಲಾಖೆಯು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಇಲಾಖೆಯು ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಮಾರ್ಚ್‌ 13ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಸಂಬಂಧ ಆಕ್ಷೇಪಣೆ ಸಲ್ಲಿಸಲು ಇಲಾಖೆಯು ಸಾರ್ವಜನಿಕರಿಗೆ 7 ದಿನಗಳ ಕಾಲಾವಕಾಶ ನೀಡಿತ್ತು. ಈ ಕಾಲಮಿತಿಯೊಳಗೆ ಸಲ್ಲಿಕೆಯಾದ ಆಕ್ಷೇಪಣಾ ಅರ್ಜಿಗಳನ್ನು ಇಲಾಖೆಯು ಪರಿಶೀಲಿಸಿ ಮೀಸಲಾತಿ ಸಂಬಂಧ ಗುರುವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.

ಮಾಲೂರು ಮತ್ತು ಬಂಗಾರಪೇಟೆ ಪುರಸಭೆಯ ತಲಾ 27 ವಾರ್ಡ್‌ಗಳು, ಮುಳಬಾಗಿಲು ನಗರಸಭೆಯ 31 ವಾರ್ಡ್‌. ಕೋಲಾರ ಹಾಗೂ ಕೆಜಿಎಫ್ ನಗರಸಭೆಯ ತಲಾ 35 ವಾರ್ಡ್‌, ಶ್ರೀನಿವಾಸಪುರ ಪುರಸಭೆಯ 23 ವಾರ್ಡ್‌ಗಳ ಮೀಸಲಾತಿ ಪಟ್ಟಿ ಅಂತಿಮವಾಗಿದೆ. ಈ ಮೀಸಲಾತಿ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿಯ ಸೂಚನಾ ಫಲಕ, ನಗರಸಭೆ ಹಾಗೂ ಪುರಸಭೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
**
ಕೋಲಾರ ನಗರಸಭೆ ವ್ಯಾಪ್ತಿಯ ವಾರ್ಡ್‌ವಾರು ಮೀಸಲಾತಿ ಪಟ್ಟಿ 
ವಾರ್ಡ್‌ ಮೀಸಲಾತಿ

1 ಟಮಕ– ಹಿಂದುಳಿದ ವರ್ಗ ಎ (ಮಹಿಳೆ)

2 ಗಾಂಧಿನಗರ– ಸಾಮಾನ್ಯ

3 ಕೋಟೆ ಬಡಾವಣೆ– ಹಿಂದುಳಿದ ವರ್ಗ ಬಿ (ಮಹಿಳೆ)

4 ಕುರುಬರಪೇಟೆ– ಸಾಮಾನ್ಯ

5 ಅಂಬೇಡ್ಕರ್ ನಗರ– ಪರಿಶಿಷ್ಟ ಜಾತಿ (ಮಹಿಳೆ)

6 ಧರ್ಮರಾಯ ನಗರ– ಹಿಂದುಳಿದ ವರ್ಗ ಎ

7 ಪಾಲಸಂದ್ರ ಬಡಾವಣೆ– ಪರಿಶಿಷ್ಟ

8 ಗಲ್‌ಪೇಟೆ– ಸಾಮಾನ್ಯ (ಮಹಿಳೆ)

9 ಫಕೀರ್ ವಾಡ, ಬ್ರಾಹ್ಮಣರ ಬೀದಿ– ಹಿಂದುಳಿದ ವರ್ಗ ಬಿ

10 ಗೌರಿಪೇಟೆ– ಹಿಂದುಳಿದ ವರ್ಗ ಎ (ಮಹಿಳೆ)

11 ಹರಳೆಪೇಟೆ, ಹಳೇ ಬಡಾವಣೆ ಮತ್ತು

ಕಠಾರಿಪಾಳ್ಯ – ಸಾಮಾನ್ಯ

12 ಪಿ.ಸಿ ಬಡಾವಣೆ,– ಹೊಸ ಬಡಾವಣೆ ಸಾಮಾನ್ಯ

13 ಪಿ.ಸಿ ಹಳ್ಳಿ ಮತ್ತು ಜಯನಗರ– ಹಿಂದುಳಿದ ವರ್ಗ ಎ

14 ಜಯನಗರ– ಸಾಮಾನ್ಯ

15 ಹಾರೋಹಳ್ಳಿ– ಪರಿಶಿಷ್ಟ ಜಾತಿ (ಮಹಿಳೆ)

16 ಮಹಾಲಕ್ಷ್ಮಿ ಬಡಾವಣೆ– ಸಾಮಾನ್ಯ

17 ಷಹೀನ್‌ಷಾ ನಗರ– ಹಿಂದುಳಿದ ವರ್ಗ ಎ (ಮಹಿಳೆ)

18 ಹೊಸ ಷಹೀನ್‌ಷಾ ನಗರ– ಸಾಮಾನ್ಯ

19 ದರ್ಗಾ ಮೊಹಲ್ಲಾ, ಷಾಹೀದ್ ನಗರ– ಹಿಂದುಳಿದ ವರ್ಗ ಎ

20 ಕಠಾರಿಪಾಳ್ಯ– ಸಾಮಾನ್ಯ (ಮಹಿಳೆ)

21 ಕೀಲಾರಿಪೇಟೆ, ಹವೇಲಿ ಮೊಹಲ್ಲಾ– ಸಾಮಾನ್ಯ

22 ಕುವೆಂಪು ನಗರ, ನ್ಯಾಮತ್ ಬಿ ದರ್ಗಾ– ಹಿಂದುಳಿದ ವರ್ಗ ಎ (ಮಹಿಳೆ)

23 ಕೆ.ಜಿ ಮೊಹಲ್ಲಾ– ಸಾಮಾನ್ಯ (ಮಹಿಳೆ)

24 ಭೋವಿ ಕಾಲೊನಿ, ಶಾಂತಿನಗರ– ಪರಿಶಿಷ್ಟ ಜಾತಿ

25 ಕಾರಂಜಿಕಟ್ಟೆ, ಮುನೇಶ್ವರ ನಗರ– ಹಿಂದುಳಿದ ವರ್ಗ ಎ

26 ಕೀಲುಕೋಟೆ– ಹಿಂದುಳಿದ ವರ್ಗ ಎ

27 ಕಾರಂಜಿಕಟ್ಟೆ– ಪರಿಶಿಷ್ಟ ಜಾತಿ

28 ಫೂಲ್‌ಷಾ ಮೊಹಲ್ಲಾ ಮತ್ತು ಕಾಕಿಷಾ ಮೊಹಲ್ಲಾ– ಸಾಮಾನ್ಯ

29 ವಿನಾಯಕ, ಸಾರಿಗೆ ನಗರ– ಪರಿಶಿಷ್ಟ ಪಂಗಡ

30 ನೂರ್ ನಗರ– ಸಾಮಾನ್ಯ (ಮಹಿಳೆ)

31 ರಹಮತ್ ನಗರ-1– ಹಿಂದುಳಿದ ವರ್ಗ ಎ

32 ರಹಮತ್ ನಗರ-2– ಸಾಮಾನ್ಯ (ಮಹಿಳೆ)

33 ರಹಮತ್ ನಗರ-3– ಸಾಮಾನ್ಯ (ಮಹಿಳೆ)

34 ಮಿಲ್ಲತ್ ನಗರ-1– ಸಾಮಾನ್ಯ (ಮಹಿಳೆ)

35 ಮಿಲ್ಲತ್ ನಗರ-2– ಸಾಮಾನ್ಯ (ಮಹಿಳೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !