‘ಕೆಲಸ ಮಾಡಲು ಬಿಡದ ಮಾಧ್ಯಮಗಳು‍’

7

‘ಕೆಲಸ ಮಾಡಲು ಬಿಡದ ಮಾಧ್ಯಮಗಳು‍’

Published:
Updated:

ಮಂಡ್ಯ: ‘ಸರ್ಕಾರದ ಕೆಲಸ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮಾಧ್ಯಮಗಳು ಬಿಡುತ್ತಿಲ್ಲ. ಮುಖ್ಯಮಂತ್ರಿಗಳು ಏನೇ ಮಾಡಿದರೂ ತಪ್ಪು ಹುಡುಕುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ’ ಎಂದು ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾಧ್ಯಮಗಳು ವಿರೋಧ ಪಕ್ಷಗಳ ಮುಖಂಡರಿಗೆ ಸಹಾಯ ಮಾಡುತ್ತಿದ್ದು ಅವರ ಪರವಾಗಿ ನಿಂತಿವೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ತಮಗೆ ಇಷ್ಟವಿಲ್ಲ ಎಂಬಂತೆ ವರದಿ ಮಾಡುತ್ತಿವೆ. ಮುಖ್ಯಮಂತ್ರಿಗಳ ವಿರೋಧಿಗಳಂತೆ ವರ್ತಿಸುತ್ತಿವೆ. ಸಣ್ಣದನ್ನು ದೊಡ್ಡದು ಮಾಡಿ ತೋರಿಸುತ್ತಿವೆ’ ಎಂದು ಆರೋಪಿಸಿದರು.

ರಮ್ಯಾ ಸೋಲು ಬಯಸಿದ್ದೆ:
ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ರಮ್ಯಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಫ್ಲೈಯಿಂಗ್‌ ಸ್ಕ್ವಾಡ್‌ ಸ್ಪರ್ಧಿಸಿದ್ದರು. ನಾನೂ ಕಾಂಗ್ರೆಸ್‌ನಲ್ಲೇ ಇದ್ದೆ. ಅವರ ಕೈಗೆ ಜಿಲ್ಲೆಯನ್ನು ಕೊಡಬಾರದು ಎಂಬ ಉದ್ದೇಶದಿಂದ ಪಕ್ಷದ ವಿರುದ್ಧವೇ ಸಭೆ ಕರೆದಿದ್ದೆ. ನಾನು ಕಾಂಗ್ರೆಸ್‌ನಲ್ಲಿದ್ದರೂ ಅವರು ಸೋಲುವುದು ನನ್ನ ಬಯಕೆಯಾಗಿತ್ತು. ನಂತರ ಕಾಂಗ್ರೆಸ್‌ ಕೆಂಗಣ್ಣಿಗೆ ಗುರಿಯಾದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !